ಕರ್ನಾಟಕಮನರಂಜನೆ

ಕೃಷ್ಣ ಜನ್ಮಾಷ್ಟಮಿ ಆಚರಣೆ: ಹುಲಿ ನೃತ್ಯ ಮಾಡಿದ ನಟ ರಕ್ಷಿತ್ ಶೆಟ್ಟಿ

ಉಡುಪಿ,ಆ.23-ಎಲ್ಲೆಡೆ ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಸಂಭ್ರಮ, ಸಡಗರ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಉಡುಪಿಯಲ್ಲೂ ಕೃಷ್ಣ ಜನ್ಮಾಷ್ಟಮಿ ವೈಭದಿಂದ ನಡೆಯುತ್ತಿದೆ.

ಮೊಸರು ಗಡಿಗೆ ಒಡೆವ ವಿಟ್ಲಪಿಂಡಿ ಹಾಗೂ ಕೃಷ್ಣನ ಬದುಕಿನ ಚಿತ್ರಣ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಇನ್ನೊಂದೆಡೆ ತಾಸೆಯ ಬಡಿತಕ್ಕೆ ಹೆಜ್ಜೆಹಾಕುವ ಹುಲಿವೇಷಧಾರಿಗಳ ಕುಣಿತವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಈ ನಡುವೆ ಮತ್ತೊಂದು ವಿಶೇಷವೆಂದರೆ ನಟ ರಕ್ಷಿತ್ ಶೆಟ್ಟಿ, ಹುಲಿ ನೃತ್ಯಕ್ಕೆ ಸ್ಟೆಪ್ ಹಾಕಿದ್ದಾರೆ. ಅಷ್ಟಮಿಯ ಸಂದರ್ಭದಲ್ಲಿ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ಉಡುಪಿ ತಂಡದ ಜೊತೆ ರಕ್ಷಿತ್ ಹುಲಿ ನೃತ್ಯ ಮಾಡಿದರು.

ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ವಿಶೇಷ ಪೂಜೆ ಪುನಸ್ಕಾರಗಳೊಂದಿಗೆ 9 ರಂಧ್ರದ ನವಗ್ರಹ ಕಿಟಕಿಯ ಮೂಲಕ ಭಕ್ತರು ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: