ಮೈಸೂರು

ಅರಣ್ಯ ಭವನದಲ್ಲಿ ಬೀಡು ಬಿಟ್ಟ ಅರ್ಜುನ ಅಂಡ್ ಟೀಂ ರಿಲ್ಯಾಕ್ಸ್ ನಲ್ಲಿ

ಮೈಸೂರು,ಆ.23:- ದಸರಾ ಮಹೋತ್ಸವ 2019ರ ಪ್ರಯುಕ್ತ  ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಅರ್ಜುನ ಅಂಡ್ ಟೀಂ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ.

ಅರಮನೆ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿವೆ. 6 ಆನೆಗಳು ಅರಣ್ಯ ಭವನಕ್ಕೆ ಬಂದಿದ್ದು, ಪ್ರಯಾಣ ಮುಗಿಸಿ ರಿಲ್ಯಾಕ್ಸ್ ನಲ್ಲಿವೆ. ನಿನ್ನೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಲಾರಿಗಳಲ್ಲಿ ಮೈಸೂರಿಗೆ ಬಂದ ಅರ್ಜುನ,ಅಭಿಮನ್ಯು,ಧನಂಜಯ, ಈಶ್ವರ, ವಿಜಯ ಹಾಗೂ ವರಲಕ್ಷ್ಮಿ ಇದೇ 26 ರಂದು ಅರಮನೆ ಪ್ರವೇಶಿಸಲಿದೆ. ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಈಶ್ವರ ದುಬಾರೆ ಕ್ಯಾಂಪ್ ನಿಂದ ಬಂದಿದ್ದು, 8 ನೇ ಬಾರಿಗೆ  ಅಂಬಾರಿಯನ್ನು ಅರ್ಜುನ ಹೊರಲಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: