ಮೈಸೂರು

ಆಯಿಷ್ ಆವಾಜ್ ಪ್ರಯುಕ್ತ ಸೈಕ್ಲಾಥಾನ್

ಅಖಿಲ ಭಾರತ ವಾಕ್  ಮತ್ತು ಶ್ರವಣ ಸಂಸ್ಥೆ ವತಿಯಿಂದ ಆಯಿಷ್ ಆವಾಜ್ 2017 ಅಂತರ ಕಾಲೇಜು ಸಾಂಸ್ಕೃತಿಕ ಮೇಳ ಇದರ  ಅಂಗವಾಗಿ ಸೈಕ್ಲಾಥಾನ್ ಆಯೋಜಿಸಲಾಗಿತ್ತು.

ಸೈಕ್ಲಾಥಾನ್ ಗೆ ವಾಕ್-ಭಾಷಾ ದೋಷ ವಿಭಾಗದ ಮುಖ್ಯಸ್ಥ ಡಾ.ಎಸ್.ಪಿ.ಗೋಸ್ವಾಮಿ ಭಾನುವಾರ ಬೆಳಿಗ್ಗೆ ಜಯನಗರ ಒನ್ ಬಳಿ ಚಾಲನೆ ನೀಡಿದರು.  ನ್ಯಾಯಾಲಯ, ಅಗ್ರಹಾರ, 100ಅಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಒಟ್ಟು ಆರೂವರೆ ಕಿ.ಮೀ ದೂರ ಕ್ರಮಿಸಲಾಯಿತು.

ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. ಸಂಸ್ಥೆಯ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ, ಉಪಾಧ್ಯಕ್ಷ ಡಾ.ಅನಿಮೇಷ್ ಬರ್ಮನ್, ಆಯಿಷ್ ಜಿಮ್ಖಾನ್, ಪಿ.ಐ.ಒ ಎ.ಆರ್.ಕೀರ್ತಿ ಉಪಸ್ಥಿತರಿದ್ದರು.

ಮಾ.17ರಿಂದ 19ರವರೆಗೆ ಮೂರುದಿನಗಳ ಆಯಿಷ್ ಆವಾಜ್ 2017ನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಅಂತರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರ ಪೂರಕವಾಗಿ ಪ್ರಮೋಷನಲ್ ಆ್ಯಕ್ಟಿವಿಟಿಯ ಭಾಗವಾಗಿ ಸೈಕ್ಲಾಥಾನ್ ಆಯೋಜಿಸಲಾಗಿತ್ತು. ಮೈಸೂರಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಟ್ರಿನ್ ಟ್ರಿನ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

Leave a Reply

comments

Related Articles

error: