ಪ್ರಮುಖ ಸುದ್ದಿವಿದೇಶ

ಯುಎಇ ರಾಜಧಾನಿ ಅಬುದಾಬಿಗೆ ಬಂದಿಳಿದ ಪ್ರಧಾನಿ ಮೋದಿ : ಫ್ರಾನ್ಸ್ ಭೇಟಿ ಯಶಸ್ವಿಯಾಗಿದೆ ಮೋದಿ ಟ್ವೀಟ್

'ಆರ್ಡರ್ ಆಫ್ ಜಾಯೆದ್' ಗೌರವ ಸ್ವೀಕರಿಸುವ ಮೋದಿ

ವಿದೇಶ(ಅಬುದಾಬಿ)ಆ.24:- ಪ್ರಧಾನಿ ನರೇಂದ್ರ ಮೋದಿ ಅವರು  ಪ್ಯಾರಿಸ್ ನಲ್ಲಿ ನಡೆದ ಜಿ7 ಶೃಂಗಸಭೆ ಬಳಿಕ ಯುಎಇಗೆ ಬಂದಿಳಿದಿದ್ದು, ಇಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇಂದು ಮುಂಜಾನೆ ಯುಎಇ ರಾಜಧಾನಿ ಅಬುದಾಬಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತ ತಂಡ ಬಂದಿಳಿದಿದ್ದು,    ಯುಎಇ ಪ್ರವಾಸದ ವೇಳೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚರ್ಚೆ ನಡೆಸಲಿದ್ದಾರೆ. ಅಂತೆಯೇ ಯುಎಇ ದೊರೆ ಶೇಖ್ ಮಹಮದ್ ಬಿನ್ ಜಾಯೆದ್ ಅನ್ ನಹ್ಯಾನ್ ಅವರೊಂದಿಗೆ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿದೇಶಗಳಲ್ಲೂ ಕಾರ್ಯ ನಿರ್ವಹಿಸುವ ಭಾರತದ ರುಪೇ ಕಾರ್ಡ್ ಸೇವೆಯನ್ನು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸರ್ಕಾರ ನೀಡುವ ಅತ್ಯುನ್ನತ ಗೌರವ ‘ಆರ್ಡರ್ ಆಫ್ ಜಾಯೆದ್’ ನ್ನು ನೀಡಿ ಗೌರವಿಸಲಾಗುತ್ತದೆ.

ಪ್ರಧಾನಿ ಮೋದಿಯವರು ಈ ಕುರಿತಂತೆ ತಮ್ಮ ಟ್ವೀಟರ್  ಬರೆದುಕೊಂಡಿದ್ದು, ಅಬುದಾಬಿ ತಲುಪಿದ್ದೇನೆ, ಯುಎಇ ದೊರೆ ಶೇಖ್ ಮಹಮದ್ ಬಿನ್ ಜಾಯೆದ್ ಅನ್ ನಹ್ಯಾನ್ ರೊಂದಿಗಿನ ಭೇಟಿಗೆ ಉತ್ಸುಕನಾಗಿದ್ದೇನೆ. ಯುಎಇ ಮತ್ತು ಭಾರತದ ನಡುವಿನ ಸೌಹಾರ್ದ ಸಂಬಂಧ ವೃದ್ದಿಗೆ ಈ ಭೇಟಿ ನೆರವಾಗಲಿದೆ. ಅಂತೆಯೇ ಉತ್ತಮ ವಾಣಿಜ್ಯ ಒಪ್ಪಂದವೂ ಭೇಟಿ ಉದ್ದೇಶವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಬುದಾಬಿ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಬಹ್ರೇನ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ನನ್ನ ಫ್ರಾನ್ಸ್ ಭೇಟಿ ಯಶಸ್ವಿಯಾಗಿದೆ. ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ, ಅದು ಅಸ್ತಿತ್ವದಲ್ಲಿರುವ ಕ್ಷೇತ್ರಗಳಲ್ಲಿನ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುತ್ತದೆ. ಅಲ್ಲಿನ ಜನತೆ ಮತ್ತು ಫ್ರಾನ್ಸ್ ಸರ್ಕಾರದ ಆತಿಥ್ಯಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ಫ್ರಾನ್ಸ್ ಭೇಟಿ ಕುರಿತಾಗಿಯೂ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: