ಕ್ರೀಡೆ

ವಿಂಡೀಸ್ ವಿರುದ್ಧದ ಟೆಸ್ಟ್: ಭಾರತಕ್ಕೆ ಮೇಲುಗೈ

ಆಯಂಟಿಗುವಾ,ಆ.24-ವೇಗಿ ಇಶಾಂತ್ ಶರ್ಮಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ಇಂಡೀಸ್ ಎರಡನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆಈ ಮೂಲಕ ವಿಂಡೀಸ್ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ.

ಅಲ್ಲದೆ ಇನ್ನು ಎರಡು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನು 108 ರನ್ ಗಳಿಸಬೇಕಿದೆವಿಂಡೀಸ್ ಬ್ಯಾಟಿಂಗ್ ಪಡೆಯ ಬೆನ್ನಲುಬು ಮುರಿದ ಇಶಾಂತ್ ಶರ್ಮಾ 42 ರನ್ ತೆತ್ತು ಐದು ವಿಕೆಟ್ ಕಿತ್ತು ಮಿಂಚಿದರು. ಟೆಸ್ಟ್ನಲ್ಲಿ ಒಂಬತ್ತನೇ ಬಾರಿಗೆ ಸಾಧನೆ ಮಾಡಿದರು. ಏತನ್ಮಧ್ಯೆ ಒಂದು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ ಸಾಧನೆ ಮಾಡಿದರು

ನಡುವೆ ಕೆಳ ಕ್ರಮಾಂಕದಲ್ಲಿ ಪ್ರತಿ ಹೋರಾಟ ನೀಡಿದ ರೋಸ್ಟನ್ ಚೇಸ್ 48 ರನ್ ಗಳಿಸಿದರು. ಇನ್ನುಳಿದಂತೆ ಶಿಮ್ರಾನ್ ಹೆಟ್ಮಾಯೆರ್ (35), ಶಾಯ್ ಹೋಪ್ (24) ಹಾಗೂ ಜಾನ್ ಕ್ಯಾಂಪೆಬ್ (23) ರನ್ ಗಳಿಸಿದರು

ಇದಕ್ಕೂ ಮೊದಲು 203/6 ಎಂಬಲ್ಲಿದ್ದ ಎರಡನೇ ದಿನದ ಆಟ ಮುಂದುವರಿಸಿದ ಭಾರತಕ್ಕೆ ಆರಂಭದಲ್ಲೇ ರಿಷಬ್ ಪಂತ್ (24) ವಿಕೆಟ್ ನಷ್ಟವಾಯಿತು. ಈ ಹಂತದಲ್ಲಿ ಜತೆಗೂಡಿದ ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮಾ ಎಂಟನೇ ವಿಕೆಟ್ಗೆ 60 ರನ್ಗಳ ಮಹತ್ವದ ಜತೆಯಾಟದಲ್ಲಿ ಭಾಗಿಯಾದರು

ಹಂತದಲ್ಲಿ 19 ರನ್ ಗಳಿಸಿದ ಇಶಾಂತ್ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಮೊಹಮ್ಮದ್ ಶಮಿ (0) ಔಟಾದರು. ಅತ್ತ ಪ್ರತಿ ಹೋರಾಟ ನೀಡಿದ ಜಡೇಜಾ 58 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿ ಗಮನ ಸೆಳೆದರು. 112 ಎಸೆತಗಳ ಫೈಟ್ ಬ್ಯಾಕ್ ಇನ್ನಿಂಗ್ಸ್ ಕಟ್ಟಿದ ಜಡ್ಡು ಮಗದೊಮ್ಮೆ ತಾವೊಬ್ಬ ನೈಜ ಆಲ್ರೌಂಡರ್ ಎಂಬುದನ್ನು ಸಾಬೀತು ಮಾಡಿದರುಇನ್ನುಳಿದಂತೆ ಜಸ್ಪ್ರೀತು ಬುಮ್ರಾ 4 ರನ್ ಗಳಿಸಿ ಅಜೇಯರಾಗುಳಿದರು. ವಿಂಡೀಸ್ ಪರ ಕೆಮರ್ ರೂಚ್ ನಾಲ್ಕು, ಶನಾನ್ ಗೇಬ್ರಿಯಲ್ ಮೂರು ಹಾಗೂ ರೋಸ್ಟನ್ ಚೇಸ್ ಎರಡು ವಿಕೆಟ್ ಕಿತ್ತು ಮಿಂಚಿದರು

ಮೊದಲು ಮೊದಲ ದಿನದಾಟದಲ್ಲಿ ಅಜಿಂಕ್ಯ ರಹಾನೆ (81), ಕೆಎಲ್ ರಾಹುಲ್ (44) ಹಾಗೂ ಹನುಮ ವಿಹಾರಿ (32) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಭಾರತವನ್ನು ಅಪಾಯದಿಂದ ಪಾರು ಮಾಡಿದ್ದರು

ಎರಡನೇ ದಿನ ಬ್ಯಾಟಿಂಗ್ಗೆ ಅನುಕೂಲಕರ ವಾತಾವರಣ ಇದ್ದರೂ ವಿಂಡೀಸ್ ಬ್ಯಾಟ್ಸ್ಮನ್ಗಳು ಅದರ ಲಾಭ ಪಡೆಯಲು ವಿಫಲರಾದರು. ಚಹಾ ವಿರಾಮದ ವೇಳೆಗೆ ಅತಿಥೇಯರು 3 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದ್ದರು. ಭರ್ಜರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಪತ್ಭಾಂದವರಾದ ಜಡೇಜಾ, ಮೊದಲ ಟೆಸ್ಟ್ ಆಡುತ್ತಿರುವ ಶಮರ್ ಬ್ರೂಕ್ಸ್ (11) ಅವರ ವಿಕೆಟ್ ಪಡೆದು ವಿಂಡೀಸ್ ಪತನಕ್ಕೆ ನಾಂದಿ ಹಾಡಿದರು. (ಎಂ.ಎನ್)

Leave a Reply

comments

Related Articles

error: