ಕರ್ನಾಟಕ

ಕಾರು ಪಲ್ಟಿ: ನಾಲ್ವರ ಸಾವು; 5 ಮಂದಿಗೆ ಗಾಯ

ಚಿಕ್ಕಬಳ್ಳಾಪುರ,ಆ.24-ಮಹೀಂದ್ರಾ ಜೈಲೊ ಕಾರು ಪಲ್ಟಿಯಾಗಿ ನಾಲ್ವರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿ ಗ್ರಾಮದ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಬಳಿ ನಡೆದಿದೆ.

ರಮೇಶ್ (30), ಮಂಜುನಾಥ್ (26), ಅಶೋಕ್ ರೆಡ್ಡಿ (26), ಗೌರಿಶ್ (23) ಮೃತಪಟ್ಟವರು. ಮೃತರೆಲ್ಲರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾಗಿದ್ದಾರೆ. ಗಾಯಗೊಂಡಿರುವ ಐದು ಮಂದಿಯನ್ನು ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇವರು ಆವಲಹಳ್ಳಿಯಿಂದ ನಂದಿಬೆಟ್ಟಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)

 

Leave a Reply

comments

Related Articles

error: