ಕ್ರೀಡೆ

ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್: ಸೆಮೀಸ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು, ಸಾಯಿ ಪ್ರಣಿತ್

ಬಾಸೆಲ್(ಸ್ವಿಟ್ಜರ್ಲೆಂಡ್),ಆ.24-ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಪಿ.ವಿ.ಸಿಂಧು, ಸಾಯಿ ಪ್ರಣಿತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಜಯ ಸಾಧಿಸಿ ಸೆಮೀಸ್ ಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 12-21, 23-21, 21-19 ರಿಂದ ಚೈನಿಸ್ ತೈಪಿಯ ತೈ ಜು ವಿಂಗ್ ವಿರುದ್ಧ ಜಯ ಸಾಧಿಸಿದರು. ಈ ಆಟಗಾರ್ತಿಯರು ಒಟ್ಟು 15 ಬಾರಿ ಮುಖಾಮುಖಿಯಾಗಿದ್ದು, ಸಿಂಧು ಐದನೇ ಗೆಲುವು ದಾಖಲಿಸಿದರು. ಈ ಮೂಲಕ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಐದನೇ ಪದಕವನ್ನು ಖಚಿತ ಪಡಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ನಲ್ಲಿ ಬಿ.ಸಾಯಿ ಪ್ರಣೀತ್ 24-22, 21-14 ರಿಂದ ಇಂಡೋನೇಷ್ಯಾದ ಜೋನಾಥನ್ ಕ್ರೆಸ್ಟ್ ವಿರುದ್ಧ ಗೆಲುವು ಸಾಧಿಸಿದರು. 1983ರಲ್ಲಿ ಪ್ರಕಾಶ್ ಪಡುಕೋಣೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಪಡೆದು ಬೀಗಿದ್ದರು. 36 ವರ್ಷಗಳ ಬಳಿಕ ಭಾರತದ ಮತ್ತೋರ್ವ ಬ್ಯಾಡ್ಮಿಂಟನ್ ಆಟಗಾರ, ಪದಕ ಖಾತರಿ ಪಡಿಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: