ಮೈಸೂರು

ಮಹಿಳೆಯ ಮೇಲೆ ದಾಳಿ ಮಾಡಿ, ಇಬ್ಬರು ಹಣ ಮತ್ತು ಚಿನ್ನ ದೋಚಿ ಪರಾರಿ

ಇಬ್ಬರು ಗೃಹಿಣಿಯ ಮೇಲೆ ದಾಳಿ ಮಾಡಿ ಮನೆಯಿಂದ ಹಣ ಮತ್ತು ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.

ಯಮುನಾ (57) ವಿದ್ಯಾರಣ್ಯಪುರಂನ ನಿವಾಸಿ. ಈಕೆ ಮನೆಯೊಳಗಿದ್ದಾಗ ಯಾರೊ ಬಾಗಿಲು ತಟ್ಟಿದ ಶಬ್ಧವಾಗಿದೆ. ಬಾಗಿಲು ತೆಗೆದಾಗ ಅಲ್ಲಿ ಯಾರೂ ಕಾಣಲಿಲ್ಲ, ಆಗ ಇಬ್ಬರು ದುಷ್ಕರ್ಮಿಗಳು ಆಕೆಯ ಮೇಲೆ ಆಕ್ರಮಣ ಮಾಡಿ ಕತ್ತನ್ನು ಕೊಯ್ದಿದ್ದಾರೆ. ನಂತರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡಿಸಿಪಿ ರುದ್ರಮಣಿ ಮತ್ತು ಇನ್ಸ್ಪೆಕ್ಟರ್ ರಘು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಶ್ವಾನ ದಳ ಕರೆತಂದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈಗಾಗಲೇ ಘಟನೆಯ ಸಿಸಿಟಿವಿ ದೃಶ್ಯಾವಳಿಯು ಪೊಲೀಸರ ಬಳಿ ಇದೆ.     

ಚಿಕಿತ್ಸೆಗಾಗಿ ಯಮುನಾ ಚಾಮುಂಡಿಪುರಂನ ರಾಮಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave a Reply

comments

Tags

Related Articles

error: