ದೇಶಮನರಂಜನೆ

ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ಮಹಿಳೆ ಈಗ ಬಾಲಿವುಡ್ ಸಿಂಗರ್.!

ಮುಂಬೈ,ಆ.24-ಮಹಿಳೆಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ನಿಂತು ಹಿಂದಿ ಹಾಡು ಹಾಡುತ್ತಿದ್ದ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಜನಪ್ರಿಯತೆ ಗಳಿಸಿದ ಮಹಿಳೆ ರಿಯಾಲಿಟಿ ಶೋದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಇದೀಗ ಅವರು ಬಾಲಿವುಡ್ ನ ಸಿಂಗರ್ ಆಗಿದ್ದಾರೆ.!

ಹೌದು, ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮೊಂಡಲ್ ಗೆ ಬಾಲಿವುಡ್ ನಲ್ಲಿ ಹಾಡುವ ಅವಕಾಶಗಿಟ್ಟಿಸಿಕೊಂಡಿದ್ದಾರೆ. ಗಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಹಿಮೇಶ್ ರೇಶ್ಮಿಯಾ ಮಹಿಳೆಗೆ ಹಾಡುವ ಅವಕಾಶ ನೀಡಿದ್ದಾರೆ.

ಹಿಮೇಶ್, ರಾನು ಮೊಂಡಲ್ ರಿಂದ ಒಂದು ಹಾಡನ್ನು ಹಾಡಿಸಿದ್ದಾರೆ. ತಮ್ಮ ಸ್ಟೂಡಿಯೋಗೆ ರಾನು ಅವರನ್ನು ಕರೆಸಿಕೊಂಡಿರುವ ಹಿಮೇಶ್ ಅವರಿಂದ `ತೇರಿ ಮೇರಿ ಕಹಾನಿ..’ ಎಂಬ ಹಾಡನ್ನು ಹಾಡಿಸಿದ್ದಾರೆ.

ರಾನು ಹಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಹಿಮೇಶ್ ಅವರ ಈ ನಡೆ ದೊಡ್ಡ ಮೆಚ್ಚುಗೆಗಳಿಸಿದೆ. ರಾನು ಅವರು ಅದ್ಭುತವಾಗಿ ಹಾಡಿದ್ದಾರೆ ಎಂದಿರುವ ಅನೇಕರು ಪೂರ್ಣ ಹಾಡು ಕೇಳುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: