ಪ್ರಮುಖ ಸುದ್ದಿ

ದಶಕಗಳಿಂದ ಪರಿಚಿತವಾಗಿರುವ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ : ಪ್ರಧಾನಿ ಮೋದಿ ಭಾವುಕ ಟ್ವೀಟ್‌

ದೇಶ(ನವದೆಹಲಿ),ಆ.24:- ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನದ ನಂತರ, ರಾಜಕೀಯ ವಲಯ ಸೇರಿದಂತೆ ದೇಶಾದ್ಯಂತ ಶೋಕ ವ್ಯಕ್ತವಾಗಿದೆ.

ಅವರು ಇಂದು 12.7 ಕ್ಕೆ ನಿಧನರಾಗಿದ್ದಾರೆ. ಆಗಸ್ಟ್ 9 ರಿಂದ ಅವರನ್ನು ದೆಹಲಿ ಮೂಲದ ಏಮ್ಸ್ ಗೆ ದಾಖಲಿಸಲಾಯಿತು. ಅವರ ಸಾವಿನ ಸುದ್ದಿ ಕೇಳಿದ ನಂತರ ಪ್ರಧಾನಿ ಮೋದಿ ತಮ್ಮ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ. ಪಿಎಂ ಮೋದಿ ಪ್ರಸ್ತುತ ಯುಎಇ ಭೇಟಿಯಲ್ಲಿದ್ದಾರೆ. ಅರುಣ್ ಜೇಟ್ಲಿಯವರ ಸಾವನ್ನು ದೊಡ್ಡ ನಷ್ಟ ಎಂದು ಬಣ್ಣಿಸಿದ ಅವರು, ತಮ್ಮ ಜೀವನದಿಂದ ದೂರ ಸಾಗಿದ ಸ್ನೇಹಿತನ ಕುರಿತು ಭಾವುಕರಾಗಿ  ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ನಾನು ದಶಕಗಳಿಂದ ಪರಿಚಿತವಾಗಿರುವ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಬರೆದಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಜೇಟ್ಲಿ   ಮುಂಚೂಣಿಯಲ್ಲಿದ್ದರು ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಅರುಣ್ ಜೇಟ್ಲಿ ಜಿ ಅವರ ನಿಧನದಿಂದ ನಾನು ಮೌಲ್ಯಯುತ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ, ಅವರು ನಮ್ಮೊಂದಿಗೆ ಅಸಂಖ್ಯಾತ ಸಂತೋಷದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಮುರಿಯಲಾಗದ ಬಾಂಧವ್ಯ ಹೊಂದಿದ್ದರು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: