ಮೈಸೂರು

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನ : ಸಂತಾಪ ವ್ಯಕ್ತಪಡಿಸಿದ ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಬಿ.ಹೆಚ್.

ಮೈಸೂರು,ಆ.24:- ಹಿರಿಯ, ಮುತ್ಸದ್ದಿ ರಾಜಕಾರಣಿ, ಮಾಜಿ ವಿತ್ತ ಸಚಿವರಾದ  ಅರುಣ್ ಜೇಟ್ಲಿ ಅವರು ದೀರ್ಘಕಾಲದ ಅಸೌಖ್ಯದಿಂದ ನಮ್ಮನ್ನು ಅಗಲಿದ್ದಾರೆ. ಇದು ಭಾರತೀಯ ಜನತಾ ಪಾರ್ಟಿಗೆ, ಕಾರ್ಯಕರ್ತರಿಗೆ ಹಾಗೂ ದೇಶದ ಜನತೆಗೆ ನಂಬಲಸಾಧ್ಯವಾದ ಆಘಾತವಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಬಿ.ಹೆಚ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ವಿತ್ತ ಸಚಿವರಾಗಿ ವಿತ್ತ ಮಾಂತ್ರಿಕ ಎಂದೇ ಹೆಸರಾದವರು   ಅರುಣ್ ಜೇಟ್ಲಿ. ಕಾನೂನು ಸಚಿವರಾಗಿ, ಮಾಹಿತಿ ಮತ್ತು ಪ್ರಸಾರ ಸಚಿವರಾಗಿ, ಕೈಗಾರಿಕ ಸಚಿವರಾಗಿ ದೇಶಕ್ಕೆ ಜೇಟ್ಲಿ ಯವರ ಕೊಡುಗೆ ಅಪಾರ. ಅವರ ನಿಧನದಿಂದ ಪಕ್ಷದಲ್ಲಿ ಹಾಗೂ ರಾಷ್ಟ್ರದಲ್ಲಿ ಒಂದು ತುಂಬಲಾರದ ನಿರ್ವಾತ ಉಂಟಾಗಿದೆ.

ಭಾರತೀಯ ಜನತಾ ಪಾರ್ಟಿಯ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದವರು ಅರುಣ್ ಜೇಟ್ಲಿ. ಅಪಾರವಾದ ಅಧ್ಯಯನ, ಜ್ಞಾನ ಹಾಗೂ ಕ್ರಿಯಾಶೀಲತೆ ಜೇಟ್ಲಿಯವರನ್ನು ಎಷ್ಟು ಉನ್ನತ ಸ್ಥಾನಕ್ಕೆ ಏರಿಸಿತ್ತು. ಬಜೆಟ್ ಮಂಡನೆಯಲ್ಲಿ, ಹಣಕಾಸು ನಿರ್ವಹಣೆಯಲ್ಲಿ, ಭಾರತೀಯ ಆರ್ಥಿಕತೆಯ ಕುರಿತು ಮಾತನಾಡುವಲ್ಲಿ ಅಧಿಕೃತತೆಯನ್ನು ಹೊಂದಿದ್ದವರು ಜೇಟ್ಲಿ. ಕಾನೂನು ವಿಚಾರದಲ್ಲೂ ಅಪಾರ ಪಾಂಡಿತ್ಯವನ್ನು ಹೊಂದಿ ಅನೇಕ ಪುಸ್ತಕಗಳನ್ನು ಅವರು ರಚಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ, ಮನೋಹರ್ ಪರಿಕ್ಕರ್,   ಅನಂತ್ ಕುಮಾರ್, ಜಾರ್ಜ್ ಫರ್ನಾಂಡಿಸ್, ಸುಷ್ಮಾ ಸ್ವರಾಜ್ ಬಳಿಕ ಅರುಣ್ ಜೇಟ್ಲಿ ಅವರನ್ನು ರಾಷ್ಟ್ರ ಕೇವಲ ಒಂದು ವರ್ಷದ ಅವಧಿಯಲ್ಲಿ ಕಳೆದುಕೊಂಡಿದೆ. ಜೇಟ್ಲಿ ಯವರಂತಹ ಮುತ್ಸದ್ಧಿಯ ಉಪಸ್ಥಿತಿ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಅಗತ್ಯವಾಗಿತ್ತು. ಅವರ ನಿಧನದ ಈ ದುಃಖವನ್ನು ಭರಿಸಲು ಪಕ್ಷಕ್ಕೆ, ಅವರ ಕುಟುಂಬಸ್ಥರಿಗೆ, ಕಾರ್ಯಕರ್ತರಿಗೆ ಹಾಗೂ ರಾಷ್ಟ್ರದ ಜನತೆಗೆ ಆ ಭಗವಂತ ಶಕ್ತಿಯನ್ನು ನೀಡಲಿ ಹಾಗೂ ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: