ಮನರಂಜನೆ

ಸಲ್ಮಾನ್ ಖಾನ್ ರನ್ನು ಭೇಟಿಯಾದ ಪ್ರಿಯಾ ಸುದೀಪ್ ಮತ್ತು ಮಗಳು

ಬೆಂಗಳೂರು,ಆ.24-ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಸುದೀಪ್ ಕುಟುಂಬ ಭೇಟಿ ಮಾಡಿದೆ. ಸುದೀಪ್ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಸಲ್ಮಾನ್ ರನ್ನು ಭೇಟಿ ಮಾಡಿದ್ದಾರೆ.

ಪ್ರಿಯಾ ಸುದೀಪ್ ಮತ್ತು ಸಾನ್ವಿ ಸಲ್ಮಾನ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೆ, ಸುದೀಪ್ ಕೂಡ ಸಲ್ಮಾನ್ ಅವರೊಂದಿಗೆ ಕುಸ್ತಿಯ ಪೋಸ್ ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ಕುಸ್ತಿಯ ಬಗ್ಗೆ ಸಲ್ಮಾನ್ ಸುಲ್ತಾನ್ ಸಿನಿಮಾ ಮಾಡಿದ್ದರು. ಸ್ಯಾಂಡಲ್ ವುಡ್ ನಲ್ಲಿ ಕುಸ್ತಿಯ ಬಗ್ಗೆ ಸುದೀಪ್ ಪೈಲ್ವಾನ್ ಸಿನಿಮಾ ಮಾಡಿದ್ದಾರೆ. ಹೀಗಾಗಿ ಈ ಫೋಟೋಗೆ ಸುಲ್ತಾನ್ ಮತ್ತು ಪೈಲ್ವಾನ್ ಎಂದು ಹೆಸರು ನೀಡಿದ್ದಾರೆ.

ಈ ಫೋಟೋವನ್ನು ಸುದೀಪ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ ಗಳು ಹಾಗೂ ಕಮೆಂಟ್ ಗಳು ಬರುತ್ತಿವೆ.

ಸುದೀಪ್, ಸಲ್ಮಾನ್ ಜೊತೆ `ದಬಾಂಗ್ 3’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. `ದಬಾಂಗ್ 3’ ಸಿನಿಮಾ ಹಿಂದಿಯ ಜೊತೆಗೆ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಡಿಸೆಂಬರ್ 20 ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. (ಎಂ.ಎನ್)

Leave a Reply

comments

Related Articles

error: