ಪ್ರಮುಖ ಸುದ್ದಿವಿದೇಶ

ಪ್ರಧಾನಿ ಮೋದಿಗೆ ಯುಎಇ ಸರ್ಕಾರದ ಪ್ರತಿಷ್ಠಿತ ‘ಆರ್ಡರ್ ಆಫ್ ಝಯೇದ್’ ಪುರಸ್ಕಾರ

ಯುಎಇ,ಆ.24-ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಸರ್ಕಾರದ ಅತ್ಯುನ್ನದ ನಾಗರಿಕ ಪುರಸ್ಕಾರವಾದ ‘ಆರ್ಡರ್ ಆಫ್ ಝಯೇದ್’ ಅನ್ನು ನೀಡಿ ಗೌರವಿಸಲಾಯಿತು.

ಅಬುಧಾಬಿಯ ದೊರೆ ಶೇಕ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠಿತ ಆರ್ಡರ್ ಆಫ್ ಝಯೇದ್ ಪ್ರಶಸ್ತಿಯನ್ನು ನೀಡಿದರು.

ಈ ಮೊದಲು ಆರ್ಡರ್ ಆಫ್ ಝಯೇದ್ ಪ್ರಶಸ್ತಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, 2ನೇ ಎಲಿಜಬೆತ್ ರಾಣಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರಿಗೆ ನೀಡಲಾಗಿದೆ.

ಫ್ರಾನ್ಸ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು ಶುಕ್ರವಾರ ಯುಎಇಗೆ ಆಗಮಿಸಿದ್ದರು. ಶನಿವಾರ ಬೆಳಿಗ್ಗೆ ಅಬುಧಾಬಿಯ ದೊರೆ ಶೇಕ್ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚಿಸಿದರು. (ಎಂ.ಎನ್)

 

Leave a Reply

comments

Related Articles

error: