ಕ್ರೀಡೆಪ್ರಮುಖ ಸುದ್ದಿ

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್​ ಫೈನಲ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಆಟಗಾರ್ತಿ ಪಿ.ವಿ.ಸಿಂಧು

ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯಳೆಂ ಹೆಗ್ಗಳಿಕೆ

ವಿದೇಶ(ಸ್ವಿಟ್ಜರ್ಲ್ಯಾಂಡ್)ಆ.25:-  ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್​ ಫೈನಲ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಭಾರತದ  ಬ್ಯಾಡ್ ಮಿಂಟನ್ ಆಟಗಾರ್ತಿ  ಪಿ.ವಿ.ಸಿಂಧು ಚಿನ್ನದ ಪದಕ ಗಳಿಸುವ ಮೂಲಕ ವಿಜಯದ ನಗು ಬೀರಿದ್ದಾರೆ.

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯಳು ಎಂಬ  ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಸ್ವಿಟ್ಜರ್ಲ್ಯಾಂಡ್ ನ ಬಾಸೆಲ್ ನಲ್ಲಿ  ನಡೆದ ಪೈನಲ್ ಕಾದಾಟದಲ್ಲಿ  5ನೇ ಶ್ರೇಯಾಂಕಿತೆ ಸಿಂಧು, ಜಪಾನ್​ನ ನಜೊಮಿ ಒಕುಹರಾ ಅವರನ್ನು 21-7, 21-7 ನೇರ ಗೇಮ್​ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ನಿನ್ನೆ ನಡೆದ ಉಪಾಂತ್ಯದ ಕಾದಾಟದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯೂ ಫೀ ಅವರನ್ನು 21-7, 21-14 ನೇರ ಗೇಮ್​ಗಳಿಂದ ಕೇವಲ 40 ನಿಮಿಷಗಳಲ್ಲಿ ಮಣಿಸಿ ಫೈನಲ್​ಗೇರಿದ್ದರು. 2017, 2018ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದ ಹೈದರಾಬಾದ್ ಆಟಗಾರ್ತಿ ಸಿಂಧು, 2013ರಲ್ಲಿ 18ನೇ ವಯಸ್ಸಿನಲ್ಲೇ ಕಂಚು ಗೆದ್ದಿದ್ದರು.  (ಎಸ್.ಎಚ್)

Leave a Reply

comments

Related Articles

error: