ಲೈಫ್ & ಸ್ಟೈಲ್

ತೂಕ ಹೆಚ್ಚಳಕ್ಕೆ ಕಾರಣ..!

ತೂಕ ಹೆಚ್ಚಳವಾಗುವುದನ್ನು ತಪ್ಪಿಸಲು ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತೇವೆ. ಆದರೆ ದಿನದ ಚಟುವಟಿಕೆಗಳ ನಡುವೆ ಕೆಲವು ಹೆಚ್ಚಿನ ಕ್ಯಾಲೋರಿಯ ಆಹಾರ ವಸ್ತುಗಳನ್ನು ಸೇವಿಸಿಬಿಟ್ಟರೆ ಕೂಡಲೇ ತೂಕ ಹೆಚ್ಚಳವಾಗ ತೊಡಗುತ್ತದೆ. ಡಯಟ್ ಗೆ ಪೂರಕವಾದ ಹಲವು ವಿಷಯಗಳಲ್ಲಿ ಗಮನವಿರಿಸಿದರೆ ನಾವು  ದೇಹದ ತೂಕ ಹೆಚ್ಚುವುದನ್ನು ತಡೆಯಬಹುದು.

ನೀರು : ಮುಖ್ಯವಾಗಿ ಕೆಲವರು ಏನಾದರೂ ತಿನ್ನುವಾಗ ಪದೇ ಪದೇ ನೀರನ್ನು ಸೇವಿಸುತ್ತಿರುತ್ತಾರೆ. ಇದರಿಂದ ದೇಹದ ತೂಕದಲ್ಲಿ ಹೆಚ್ಚಳವಾಗಲಿದೆ. ಪದೇ ಪದೇ ನೀರನ್ನು ಕುಡಿಯುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ದೇಹದಲ್ಲಿ ಬೊಜ್ಜು ಶೇಖರಗೊಂಡು ತೂಕ ಹೆಚ್ಚುತ್ತದೆ.

ಟಿವಿ ನೋಡುತ್ತಾ ತಿನ್ನುವುದು : ಬಹಳ ಸಮಯದವರೆಗೆ ಟಿವಿ ವೀಕ್ಷಿಸುತ್ತ ಆಹಾರ ಸೇವಿಸಿದರೆ ಎಷ್ಟು ಆಹಾರ ಸೇವಿಸಿದ್ದೇವೆಂಬುದು ಅರಿವಿಗೆ ಬಂದಿರುವುದಿಲ್ಲ. ಅಕಸ್ಮಾತ್ ಹೈಕ್ಯಾಲರಿಯ(ಸ್ನ್ಯಾಕ್ಸ್) ಆಹಾರ ಸೇವಿಸುತ್ತ ಕುಳಿತರೆ ತೂಕದಲ್ಲಿ ಹೆಚ್ಚಳವಾಗಲಿದೆ.

ಒಂದೇ ರೀತಿಯ ಆಹಾರ ಸೇವನೆ : ಪ್ರತಿದಿನ ಒಂದೇ ರೀತಿಯ ಆಹಾರ ಸೇವಿಸುವುದರಿಂದ ಶರೀರಕ್ಕೆ ಅವಶ್ಯವಿರುವ ನ್ಯೂಟ್ರಿಯಾಂಟ್ಸ್ ಲಭಿಸುವುದಿಲ್ಲ. ಇದರಿಂದ ಮೆಟಾಬಾಲಿಸಂ ಮಂದಗತಿಯಾಗಲಿದ್ದು, ತೂಕದಲ್ಲಿ ಹೆಚ್ಚಳವಾಗಲಿದೆ.

ಉಪಹಾರ ಸೇವಿಸದಿರುವುದು : ಬೆಳಗಿನ ಉಪಹಾರ ಸೇವಿಸದೇ ಇರುವುದರಿಂದ ಶರೀರಕ್ಕೆ ಬೇಕಾದ ಶಕ್ತಿ ಲಭಿಸುವುದಿಲ್ಲ. ಇದರಿಂದ ದಿನವಿಡೀ  ಏನಾದರೂ ತಿನ್ನುತ್ತಲೇ ಇರಬೇಕು ಎನಿಸುತ್ತದೆ. ಇದರಿಂದ ತೂಕ ಹೆಚ್ಚಲಿದೆ.

ಸ್ನ್ಯಾಕ್ಸ್ : ದಿನವಿಡೀ ಕುಳಿತಿರುವುದು ಮತ್ತು ಸ್ನ್ಯಾಕ್ಸ್ ತಿನ್ನುವುದರಿಂದ ಶರೀರಕ್ಕೆ ಅಧಿಕ ಕ್ಯಾಲರಿ ಸಿಗಲಿದೆ. ಇದರಿಂದ ತೂಕದಲ್ಲಿ ಹೆಚ್ಚಳವಾಗಲಿದೆ.

ಕಾಫಿ : ದಿನಕ್ಕೆ ಎರಡು ಅಥವಾ ಮೂರು ಬಾರಿ ಕಾಫಿ ಕುಡಿಯುವುದರಿಂದ ಅದರ ಜೊತೆ ಸ್ನ್ಯಾಕ್ಸ್ ತಿನ್ನುವುದರಿಂದ ಶರೀರಕ್ಕೆ ಹೆಚ್ಚಿನ ಕ್ಯಾಲರಿ ಲಭಿಸಲಿದ್ದು, ಇದರಿಂದ ತೂಕ ಹೆಚ್ಚಳವಾಗಲಿದೆ.

ತಂಪು ಪಾನೀಯ : ತಂಪು ಪಾನೀಯಗಳಲ್ಲಿ ಸಕ್ಕರೆಯ ಪ್ರಮಾಣ ಹೇರಳವಾಗಿರುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿ ಸಿಗಲಿದೆ. ಇದರಿಂದಲೂ ತೂಕ ಹೆಚ್ಚಳವಾಗಲಿದೆ.

ಶರಾಬು : ಶರಾಬನ್ನು ಸೇವಿಸುವುದರಿಂದ ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿ ಸಿಗಲಿದೆ. ಇದರ ನಂತರ ಆಹಾರ ಸೇವಿಸಿ ತಕ್ಷಣ ಮಲಗುವುದರಿಂದ ಶರೀರದಲ್ಲಿನ ತೂಕ ಹೆಚ್ಚಲಿದೆ.

ಪ್ರವಾಸದ ಸಂದರ್ಭ ತಿನ್ನುವುದು : ಸುದೀರ್ಘ ಪಯಣದಲ್ಲಿ ಕೆಲವರು ತಿನ್ನುತ್ತಲೇ ಸಾಗುತ್ತಿರುತ್ತಾರೆ. ಇದರಿಂದ ಶರೀರಕ್ಕೆ ಅಧಿಕತಮ ಕ್ಯಾಲರಿ ಸೇರ್ಪಡೆಗೊಳ್ಳಲಿದ್ದು, ಇದರಿಂದ ಹೊಟ್ಟೆಯಲ್ಲಿ ಕೊಬ್ಬಿನಂಶ ಶೇಖರಗೊಂಡು ಹೊಟ್ಟೆ ದಪ್ಪವಾಗಲಿದೆ.

Leave a Reply

comments

Related Articles

error: