ಮೈಸೂರು

ಶಿವಾಜಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ : ಎಂ.ಜೆ.ರವಿಕುಮಾರ್ ಬಣ್ಣನೆ

ಶೌರ್ಯ, ಸಾಹಸ, ಹೋರಾಟ, ಆದರ್ಶ ಆಡಳಿತದ ಪ್ರತೀಕ ಛತ್ರಪತಿ ಶಿವಾಜಿ ಮಹಾರಾಜರು ಎಂದು ಮೇಯರ್ ಎಂ.ಜೆ.ರವಿಕುಮಾರ್ ಅಭಿಪ್ರಾಯಪಟ್ಟರು.

ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 390ನೇ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿವಾಜಿ ದೇಶಕಂಡ ಮಹಾನ್ ನಾಯಕರಲ್ಲಿ, ಹೋರಾಟಗಾರರಲ್ಲಿ ಅಗ್ರಗಣ್ಯ. ತನ್ನ ಆಡಳಿತ ಅವಧಿಯಲ್ಲಿ ಅನೇಕ ಜನಪರ ಹೋರಾಟ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿ ಇಂದಿಗೂ ಜನಮಾನಸದಲ್ಲಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಅಂತಹ ಹುಟ್ಟು ಹೋರಾಟಗಾರರ ಜಯಂತಿ ಆಚರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ಶಿವಾಜಿ ನೆಪೋಲಿಯನ್‍ಗಿಂತಲೂ ಅತ್ಯಂತ ಯಶಸ್ವಿ ಆಡಳಿತ ನಡೆಸಿದ ಸೇನಾ ನಾಯಕ. ಸುಸೂತ್ರವಾಗಿ ಆಡಳಿತ ನಡೆಸುವ ಸಲುವಾಗಿ ಅಷ್ಟ ಮಂತ್ರಿಗಳನ್ನು ನೇಮಿಸಿದ ದೇಶದ ಮೊದಲ ರಾಜ. ಸಮಾಜದಲ್ಲಿನ ಪ್ರತಿಯೊಬ್ಬರ ಏಳಿಗೆಗಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಹಿಂದೂಧರ್ಮದ ರಕ್ಷಣೆಗಾಗಿ ನಿರಂತರ ಹೋರಾಟಗಳನ್ನು ಮಾಡಿದ ದಂಡನಾಯಕ. ಕನ್ನಡಕ್ಕೂ ಶಿವಾಜಿಗೂ ಅವಿನಾಭಾವ ಸಂಬಂಧವಿದ್ದು, ಅನೇಕ ಕೊಡುಗೆಗಳನ್ನು ಕನ್ನಡಕ್ಕೆ ನೀಡಿದ್ದಾರೆ. ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಸಂಬಂಧ ಮನವಿ ಬಂದಿದ್ದು, ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಮರಾಠ ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರೆ ಅಂತಹವರಿಗೆ ಪ್ರೋತ್ಸಾಹಧನ ಹಾಗೂ ಲ್ಯಾಪ್‍ಟಾಪ್ ಸಹ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಉಪವಿಭಾಗಾಧಿಕಾರಿ ಆನಂದ್, ತಹಸೀಲ್ದಾರ್ ರಮೇಶ್ ಬಾಬು, ಛತ್ರಪತಿ ಶಿವಾಜಿ ಮಾಹಾರಾಜರ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಕೆ.ನಾಗೇಂದ್ರ ರಾವ್ ಅವತಾಡೆ, ಪಾಲಿಕೆ ಸದಸ್ಯರಾದ ಸುನೀಲ್, ಅನಂತರಾಜು, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: