ಮೈಸೂರು

 ನಕಲಿ ವಕೀಲನಿಗೆ ಜಾಮೀನು ಮಂಜೂರು

ಮೈಸೂರು,ಆ.26:-  ಕಳೆದ 33 ವರ್ಷಗಳಿಂದ ವಕೀಲನೆಂದು  ಹೇಳಿಕೊಂಡು  ಹುಣಸೂರಿನ  ನ್ಯಾಯಾಲಯಗಳಲ್ಲಿ  ಹಲವಾರು ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ್ದ  ಮತ್ತು ಹುಣಸೂರು   ವಕೀಲರ ಸಂಘದಲ್ಲಿ ಅಧ್ಯಕ್ಷನಾಗಿದ್ದ  ಎಂ ವಿಲಿಯಮ್ಸ್  ಎಂಬವರ ವಿರುದ್ಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ    29.05.2019 ರಂದು ಪ್ರಕರಣ ದಾಖಲಾಗಿತ್ತು.

ಇದೀಗ  ವಿಲಿಯಮ್ಸ್ ಗೆ  ಹೈ ಕೋರ್ಟ್    ಜಾಮೀನು ಮಂಜೂರು ಮಾಡಿದ್ದು, ವಿಲಿಯಮ್ಸ್   24.08.2019 ರಂದು ಠಾಣೆಗೆ  ಹಾಜರಾದ ಮೇರೆಗೆ ತನಿಖಾಧಿಕಾರಿಗಳಾದ ಮಹೇಶ್ ಜೆ ಇ,  ಪಿ ಎಸ್ ಐ ವಿಚಾರಣೆ ಮಾಡಿ ಈತನನ್ನು   ನ್ಯಾಯಾಲಯದ ಆದೇಶದ‌ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: