ಮೈಸೂರು

ಮೈಸೂರು ವಾರಿಯರ್ಸ್ ಗೆ ರೋಚಕ ಗೆಲುವು

ಆರಂಭಿಕ ಆಟಗಾರ ರಾಜೂ ಭಟ್ಕಳ ಅವರ 61ರನ್ ಹಾಗೂ ಅನಿರುದ್ಧ ಜೋಶಿಯವರ 56 ರನ್ ಗಳ ಅಮೋಘ ಬ್ಯಾಟಿಂಗ್ ನೆರವಿನಿಂದ ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ರಾಜ ನಗರ ಕೆ ಎಸ್ ಸಿ ಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ  5ನೇ ಆವೃತ್ತಿಯ ಸೈಕಲ್ ಫ್ಯೂರ್ ಅಗರಬತ್ತಿ ಪ್ರಾಯೋಜಿತ  ಕೆಪಿಎಲ್ ಟಿ 20  ಟೂರ್ನಿಯಲ್ಲಿ ಸತತ 4ನೇ ಜಯ ದಾಖಲಿಸುವುದರೊಂದಿಗೆ ಬಿಜಾಪು ಬುಲ್ಸ್ ನ್ನು 4ವಿಕೆಟ್ ಗಳಿಂದ ಮಣಿಸಿದೆ.

162 ಮೊತ್ತಗಳ ಗುರಿಯನ್ನು ಹೊಂದಿದ್ದ ಮೈಸೂರು ವಾರಿಯರ್ಸ್ ಆರಂಭದಲ್ಲಿ ತಡವರಿಸಿ ಮೊದಲ ಓವರಿನಲ್ಲಿಯೇ ಅರ್ಜುನ್ ಹೊಯ್ಸಳ ಅವರನ್ನು ಕಳೆದುಕೊಂಡಿತ್ತು. ಆರಂಭಿಕ ವೈಫಲ್ಯದ ನಡುವೆಯೂ ಸತತ ನಾಲ್ಕು ಹಾಗೂ ಆರು ರನ್ ಗಳನ್ನು ಬಾರಿಸುವ ಮೂಲಕ 19.4ಓವರ್ ಗಳಲ್ಲಿ 6ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

ಗೌತಮ್(10) ಜೊನಾಥನ್(1) ಮನಿಷ್ ಪಾಂಡೆ(4) ರನ್ ಪಡೆದರು. ಪಂದ್ಯ ಶ್ರೇಷ್ಠರಾಗಿ ಅನಿರುದ್ಧ ಜೋಶಿ ಗಮನ ಸೆಳೆದರು.

ಬಿಜಾಪುರ ಬುಲ್ಸ್: 20 ಓವರ್ ಗಳಲ್ಲಿ 161/6 , (ಆರ್ ಸಮರ್ಥ 66, ಅರ್ಷದೀಪ್ 27. ಕೆ.ಸಿ.ಅವಿನಾಶ್ 21, ಕೆ.ಗೌತಮ್ 3/23)

ಮೈಸೂರು ವಾರಿಯರ್ಸ್: 19.4 ಓವರ್ ಗಳಲ್ಲಿ 167/6, (ರಾಜೂ ಭಟ್ಕಳ್ 61, ಅನಿರುದ್ಧ 56, ಜೆ.ಸುಚಿತ್ 19, ಎ.ಮಿಥುನ್ 2/36, ಜಹೂರ್ ಫಾರೂಕಿ 2/26)

Leave a Reply

comments

Tags

Related Articles

error: