ಮೈಸೂರು

ಯುವಕನ ಮೇಲೆ ಕರಡಿ ದಾಳಿ : ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಮೈಸೂರು,ಆ.27:- ಯುವಕನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಯುವಕನಿಗೆ ಗಂಭೀರ ಗಾಯವಾಗಿರುವ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ವೀರನ ಹೊಸಹಳ್ಳಿ ಗೇಟ್ ಬಳಿ ನಡೆದಿದೆ.

ವೀರನಹೊಸಹಳ್ಳಿ ಗ್ರಾಮದ ವಿಜಯ್ ಮೇಲೆ  ಕರಡಿ ದಾಳಿ ನಡೆಸಿದೆ. ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಕರಡಿ ದಾಳಿ ನಡೆಸಿದ್ದು, ಯುವಕನ ತಲೆ ಮತ್ತು ಕೈಗೆ ಕಚ್ಚಿದೆ. ಕರಡಿ ದಾಳಿಯಿಂದ ಯುವಕ ಕಿರುಚುತ್ತಿದ್ದಾಗ ದಾರಿಹೋಕರು ರಕ್ಷಣೆಗೆ ಧಾವಿಸಿದ್ದಾರೆ.

ಗಾಯಾಳು ವಿಜಯ್ ನನ್ನು  ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: