ಮೈಸೂರು

ಕಾರುಗಳ ಮುಖಾಮುಖಿ ಡಿಕ್ಕಿ : ಅಪಾಯದಿಂದ ಪಾರು

ಭಾನುವಾರ ಸಾಯಂಕಾಲ 4.30ರ ಸುಮಾರಿಗೆ ಕಾರುಗಳೆರಡರ ಮುಖಾಮುಖಿ ಡಿಕ್ಕಿಯಲ್ಲಿ  ಒಂದು ಕಾರಿನ ಮುಂಭಾಗ ಸಂಪೂರ್ಣ ನಜ್ಜುಜುಜ್ಜಾಗಿದ್ದು, ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ವೈದ್ಯರಾಗಿರುವ ಖಲಿ ಟಿ.ಕೆ.ಲೇ ಔಟ್ ನಿಂದ ಸರಸ್ವತಿಪುರಂ ಕಡೆ ಸಾಗುತ್ತಿದ್ದರು.ಇದೇ  ವೇಳೆ ಪ್ರಸನ್ನ ಎಂಬವರು  ವೇಳೆ ಕುಕ್ಕರಹಳ್ಳಿ ಕಡೆಯಿಂದ ವಿಜಯಬ್ಯಾಂಕ್ ಸರ್ಕಲ್ ಕಡೆ ತೆರಳುತ್ತಿದ್ದರು. ಭಾನುವಾರವಾದ್ದರಿಂದ ಸಿಗ್ನಲ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ತಿಳಿಯದೇ ಈ ಅವಘಡ ನಡೆದಿದೆ.  ಪ್ರಸನ್ನ ಅವರ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕುವೆಂಪು ನಗರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಕುವೆಂಪುನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: