ಮೈಸೂರು

ಓ ಸಂಚಾರಿ ಅಂತರಂಗಂ ಕೃತಿ ಲೋಕಾರ್ಪಣೆ

ಮೈಸೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ  ಕರ್ನಾಟಕ ರಾಜ್ಯ ದೊಂಬಿದಾಸರ ಸಾಂಸ್ಕೃತಿಕ ವೇದಿಕೆಯ ಮೈಸೂರು ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಕುಪ್ಪೆ ನಾಗರಾಜ ಅವರ `ಅಲೆಮಾರಿ ಅಂತರಂಗ’ ಕೃತಿಯ ತೆಲಗು ಅನುವಾದಿತ `ಓ ಸಂಚಾರಿ ಅಂತರಂಗಂ’ ಕೃತಿ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭವನ್ನು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಸ್ಕೃತಿ, ಕಲೆಯನ್ನು ಉಳಿಸಿ, ಬೆಳೆಸುವುದು ನಮ್ಮ ಜವಾಜ್ದಾರಿಯಾಗಿದೆ. ಹಿಂದುಳಿದ ಜನಾಂಗದವರು ಸಿಕ್ಕ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಆರ್.ಸದಾನಂದ, ಹಿರಿಯ ಪತ್ರಕರ್ತ ಜೆ.ಪಿ.ಬಸವರಾಜು, ಡಾ.ನರೇಂದ್ರ ಕುಮಾರ್, ಆರ್.ಸದಾನಂದ, ಕುಪ್ಪೆ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: