ಮೈಸೂರು

ಕಳೆದು ಹೋಗಿರುವ ಸಂಸ್ಕೃತಿಯನ್ನು ಮರಳಿ ಪಡೆದುಕೊಳ್ಳಬೇಕಿದೆ : ಬಿ.ಕೆ.ಸೋಮಪ್ರಭಾಜೀ

ಮಹಿಳೆ ಪುರುಷರ ಸಹಕಾರದೊಂದಿಗೆ ಕಳೆದು ಹೋಗಿರುವ ಸಂಸ್ಕೃತಿಯನ್ನು ಮರಳಿ ಪಡೆದುಕೊಳ್ಳಬೇಕಿದೆ ಎಂದು ಮಹಾರಾಷ್ಟ್ರ ಸೊಲ್ಲಾಪುರದ ರಾಜಯೋಗಿನಿ ಬಿ.ಕೆ. ಸೋಮಪ್ರಭಾಜೀ ತಿಳಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವದ ಪ್ರಯುಕ್ತ  ಹಮ್ಮಿಕೊಳ್ಳಲಾದ ಮಹಿಳಾ ಸಮಾವೇಶದಲ್ಲಿ ಸಂಸ್ಕೃತಿಯ ಸಂರಕ್ಷಕಳಾಗಿ ಮಹಿಳೆ ಎಂಬ ವಿಷಯದ ಕುರಿತು ಮಾತನಾಡಿದರು. ನಮ್ಮ ಭಾರತ ಸರ್ವಶೇಷ್ಠ , ಸುಸಂಸ್ಕೃತ ರಾಷ್ಟ್ರ. ಈ ನಾಡಿನಲ್ಲಿ ಜನ್ಮ ಪಡೆದ ನಾವೇ ಪುಣ್ಯವಂತರು, ನಮ್ಮ ರಾಷ್ಟ್ರವು ಸತ್ಯಯುಗದಲ್ಲಿ ಸಂಪತ್ತು, ಸೌಂದರ್ಯ, ವಜ್ರ ವೈಢೂರ್ಯ ಗಳಿಂದ ತುಂಬಿ ತುಳುಕುತ್ತಿತ್ತು. ಮನುಷ್ಯ 5 ಮಾರ್ಗವನ್ನು ತನ್ನ ಜೀವನದಲ್ಲಿ ರೂಢಿಸಿಕೊಂಡರೇ ಶಾಂತಿಯನ್ನು ಪಡೆದುಕೊಳ್ಳಬಹುದು. ನಮ್ಮ ಜನ್ಮಭೂಮಿಯ ಋಣ ತೀರಿಸುವಂತಹ ಕೆಲಸ ಮಾಡಬೇಕು.ಈ ದಿವ್ಯ ಸಂಸ್ಕೃತಿಯನ್ನು ಮತ್ತಟ್ಟು ದೇಶದಾದ್ಯಂತ ಪಸರಿಸಲು ಮಹಿಳೆಯರೇ ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ.ಮೀನಾಜಿ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಮಾಜಿ ಮೇಯರ್ ಮೋದಮಣಿ, ವಾಣಿ ನಾಗೇಂದ್ರ, ಪಿ.ವಿ.ಸ್ನೇಹ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: