ಕ್ರೀಡೆಮನರಂಜನೆ

ಪಿ.ವಿ.ಸಿಂಧು ಬಯೋಪಿಕ್: ಕೋಚ್ ಗೋಪಿಚಂದ್ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ನಟ

ಮುಂಬೈ,ಆ.28- ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಅವರ ಬಯೋಪಿಕ್ ಬಾಲಿವುಡ್ ನಲ್ಲಿ ಮೂಡಿಬರುತ್ತಿದೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

ಇದೀಗ ಸಿಂಧು ಕೋಚ್ ಪುಲ್ಲೇಲ ಗೋಪಿಚಂದ್ ಪಾತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿದೆ. ವಿಶ್ವ ಚಾಂಪಿಯನ್ಷಿಪ್ನಲ್ಲಿ ಸಿಂಧು ಸ್ವರ್ಣ ಗೆದ್ದ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಟ್ವಿಟರ್ನಲ್ಲಿ ಅಭಿನಂದಿಸಿದ್ದರು. ಇದೊಂದು ಮಹತ್ವದ ಗೆಲುವು ಎಂದಿದ್ದರು

ಈ ಬಗ್ಗೆ ಗೋಪಿಚಂದ್ ಪ್ರತಿಕ್ರಿಯಿಸಿದ್ದು, ನನಗೆ ಅಕ್ಷಯ್ ಕುಮಾರ್ ಎಂದರೆ ಇಷ್ಟ. ನಿಜವಾಗಿಯೂ ಅವರು ನನ್ನ ಪಾತ್ರ ಪೋಷಿಸಿದರೆ ಅದ್ಭುತವಾಗಿರುತ್ತದೆ. ಯಾಕೆಂದರೆ ನಾನು ಇಷ್ಟಪಡುವ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಆದರೆ ಬಯೋಪಿಕ್ ಬಗ್ಗೆ ನನಗೆ ಸ್ಪಷ್ಟನೆ ಇಲ್ಲ ಎಂದಿದ್ದಾರೆ

ಭಾರತ ಬ್ಯಾಡ್ಮಿಂಟನ್ ತಂಡಕ್ಕೆ ಗೋಪಿಚಂದ್ ರಾಷ್ಟ್ರೀಯ ಕೋಚ್ ಆಗಿದ್ದಾರೆ. 1999ರಲ್ಲಿ ಅರ್ಜುನ, 2001ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ, 2009ರಲ್ಲಿ ದ್ರೋಣಾಚಾರ್ಯ, 2014ರಲ್ಲಿ ಪದ್ಮಭೂಷಣ್ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ ಗೋಪಿಚಂದ್.

ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಪಿ.ವಿ.ಸಿಂಧು ಬಯೋಪಿಕ್ ಯಾವಾಗ ಸೆಟ್ಟೇರುತ್ತೆ, ಸಿಂಧು ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಎಂ.ಎನ್)

Leave a Reply

comments

Related Articles

error: