ಮೈಸೂರು

ಹೊತ್ತಿ ಉರಿದ ಗ್ಯಾಸ್ ಸಿಲಿಂಡರ್ : ತಪ್ಪಿದ ಭಾರೀ ಅನಾಹುತ

ಮೈಸೂರಿನ ವಿನಾಯಕ ನಗರದ 8ನೇ ಕ್ರಾಸ್ ನ ಮನೆಯೊಂದರಲ್ಲಿ ಕಾರ್ಯಕ್ರಮ ನಿಮಿತ್ತ ಬಾಡಿಗೆಗೆಂದು ತಂದಿದ್ದ ಸಿಲಿಂಡರ್ ಹೊತ್ತಿ ಉರಿದು ಗಾಬರಿ ಸೃಷ್ಟಿಸಿದ ಘಟನೆ ನಡೆದಿದೆ.

ವಿನಾಯಕ ನಗರದ ಎಂಟನೇ ಕ್ರಾಸ್ ಬಸವರಾಜು ಎನ್ನುವವರ ಮನೆಯಲ್ಲಿ ಸೋಮವಾರ ಬೆಳಿಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಬಾಡಿಗೆಗೆ ಸಿಲಿಂಡರ್ ಒಂದನ್ನು ತರಲಾಗಿತ್ತು. ಅಡುಗೆ ಮಾಡಲು ಗ್ಯಾಸ್ ಹಚ್ಚಲು ತೆರಳಿದ ವೇಳೆ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿಯಲಾರಂಭಿಸಿದೆ. ತಕ್ಷಣ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ತಿಳಿಸುತ್ತಿದ್ದಂತೆ ಅವರು ನಾವು ಬರುವ ತನಕ ಈ ರೀತಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಅವರ ಸಲಹೆಯ ಮೇರೆಗೆ  ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣ ಅಗ್ನಿಶಾಮಕ ಠಾಣೆಯ ನಾಗರಾಜ್ ಅರಸ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ.

ಮನೆಯ ಸುತ್ತಮುತ್ತಲು ಹಲವಾರು ವಾಹನಗಳು, ವಿದ್ಯುತ್ ಕೇಬಲ್ ಗಳಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

comments

Related Articles

error: