ಮೈಸೂರು

ವಿವಿ ಅಂತರ ಕಾಲೇಜು ಅಂತರ ವಲಯ ಮಹಿಳೆಯರ ಕ್ರೀಡಾಕೂಟ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕ್ಯಾತನಹಳ್ಳಿ ಹಾಗೂ ದೈಹಿಕ ಶಿಕ್ಷಣ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರ ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಅಂತರ ವಲಯ ಮಹಿಳೆಯರ ಕ್ರೀಡಾಕೂಟವನ್ನು ಕ್ಯಾತನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಮೂರು ದಿನಗಳ ಕಾಲದ ನಡೆಯುವ   ಕ್ರೀಡಾಕೂಟವನ್ನು ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಿಸ್ತುಬದ್ಧ ಜೀವನಕ್ಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ. ಸರ್ಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಮೇಲುಕೋಟೆ ಶಾಸಕ  ಕೆ ಎಸ್ ಪುಟ್ಟಣ್ಣಯ್ಯ ಮಾತನಾಡಿ ಅವರು  ಜೀವನದಲ್ಲಿ ಆಟ ಮತ್ತು ನಗು ಮುಖ್ಯ. ಸರ್ಕಾರ ಕ್ರೀಡೆಗೆ ಹೆಚ್ಚಿನ ಹಣವನ್ನು ವಿನಿಯೋಗಿಸಬೇಕು.  ಕಬಡ್ಡಿ, ಕುಸ್ತಿಗಳಂತಹ ದೇಶೀಯ ಕ್ರೀಡೆಗಳನ್ನು ಉತ್ತೇಜಿಸಬೇಕು. ಕ್ರೀಡಾಪಟುಗಳು ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಯಾವುದಾದರೂ ಪದಕಗಳನ್ನು ತಂದರೆ ಅವುಗಳಷ್ಟೆ ಘನತೆ ಹೆಚ್ಚುತ್ತದೆ . ಕ್ರೀಡಾಪಟುಗಳನ್ನು ದತ್ತು ತೆಗೆದುಕೊಂಡು ಅವರಿಗೆ ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ಜಿ.ಪಂ ಸದಸ್ಯೆ, ಅನಸೂಯ ದೇವರಾಜ್, ತಾ.ಪಂ.ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ,  ಕ್ಯಾತನಹಳ್ಳಿ ಕ್ರೀಡಾಕೂಟದ ಮಾಜಿ ಅಧ್ಯಕ್ಷ ಕೆ .ಎಸ್. ಪ್ರಕಾಶ್, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ ಪಿ ಕೃಷ್ಣಯ್ಯ, ಮೈಸೂರು ವಿಶ್ವವಿದ್ಯಾನಿಲಯದ  ದೈಹಿಕ ಶಿಕ್ಷಣ ವಿಭಾಗದ ವಿಶ್ರಾಂತ ನಿರ್ದೇಶಕರು ಡಾ ಸಿ ಕೃಷ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೆಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಪುಟ್ಟಬುದ್ದಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: