Uncategorizedಪ್ರಮುಖ ಸುದ್ದಿಮೈಸೂರು

ಸಿದ್ದರಾಮಯ್ಯ ಇದ್ದಾರೆ ಅಂತ ಜನ್ರಿಗೆ ಹೇಗೆ ಗೊತ್ತಾಗ್ಬೇಕು : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸೋಮಣ್ಣ ತಿರುಗೇಟು

ಮೈಸೂರು,ಆ.29:- ಸಿದ್ದರಾಮಯ್ಯ ಇದ್ದಾರೆ ಅಂತ ಜನ್ರಿಗೆ ಹೇಗೆ ಗೊತ್ತಾಗ್ಬೇಕು. ಈ ರೀತಿ ಹೇಳಿಕೆಯಿಂದ ಅವರ ಇರುವಿಕೆ ತೋರ್ಪಡಿಸಿಕೊಳ್ಳುತ್ತಿದ್ದಾರೆ ಎಂದು  ಮಧ್ಯಂತರ ಚುನಾವಣೆಗೆ ರೆಡಿಯಾಗಿ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸೋಮಣ್ಣ ತಿರುಗೇಟು ನೀಡಿದ್ದಾರೆ.

ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ನಗರ ಹಾಗೂ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮಾಹಿತಿ ಪಡೆದ ಸೋಮಣ್ಣ ಬಳಿಕ ಮಾತನಾಡಿ ನಮ್ಮದು ಶಿಸ್ತಿನ ಪಕ್ಷ.  ಎಲ್ರೂ ಸಮಾಧಾನವಾಗಿ ಇದ್ದಾರೆ. ಇನ್ನು ಅಸಮಾಧಾನದ ಮಾತೆಲ್ಲಿ? ವಿರೋಧ ಪಕ್ಷಗಳ ಶಾಸಕರ ಸಭೆ ಕರೆದು ಮಾತನಾಡುತ್ತೇನೆ. ಎಸ್ ರಾಮದಾಸ್ ಕೂಡ ದಸರಾ ಕಾರ್ಯಕ್ರಮದಲ್ಲಿ ಭಾಗಿ ಆಗ್ತಾರೆ. ಶನಿವಾರ ಅವರ ಮನೆಗೆ ಭೇಟಿ ನೀಡಿ ಅಸಮಧಾನ ಶಮನ ಮಾಡುತ್ತೇನೆ ಎಂದರು.

ದಸರಾ ಉಪಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ  ಕೂಡಲೇ ಒಳ್ಳೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದು, ಇಂದು ಅಥವಾ ನಾಳೆ ಉಪಸಮಿತಿಗಳಿಗೆ ಪಕ್ಷದ ಕಾರ್ಯಕರ್ತರ ನೇಮಕ ಸಾಧ್ಯತೆ ಇದೆ ಎಂದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ .ಶಾಸಕ ಎಲ್ ನಾಗೇಂದ್ರ , ನಗರ ಜಿಲ್ಲಾ ಅಧ್ಯಕ್ಷರು ಭಾಗಿ ಯಾಗಿದ್ದು, ಉಪಸಮಿತಿ ಅಧ್ಯಕ್ಷರು ,ಸದಸ್ಯರ ಲೀಸ್ಟ್ ಇಂದೇ ಫೈನಲ್ ಆಗುವ ಸಾಧ್ಯತೆ  ಇದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: