ಪ್ರಮುಖ ಸುದ್ದಿಮೈಸೂರು

ಸೆ.1 ರಂದು ಪದ್ಮಶ್ರೀ ಪಂಡಿತ್ ರಾಜೀವ ತಾರಾನಾಥ ಅಭಿನಂದನೆ

ಮೈಸೂರು,ಆ.29 :  ಪದ್ಮಶ್ರೀ ಪುರಸ್ಕೃತರು ಅಂತರರಾಷ್ಟ್ರೀಯ ಖ್ಯಾತಿಯ ಸರೋದ ವಾದಕರಾದ ಪಂಡಿತ್ ರಾಜೀವ ತಾರಾನಾಥ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪಂಡಿತ್‌ ರಾಜೀವ ತಾರಾನಾಥ ಅಭಿನಂದನಾ ಸಮಿತಿ ಟ್ರಸ್ಟಿ ಪ್ರೊ ವಿ . ಕೆ . ನಟರಾಜ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೆ.1 ರಂದು, ಸಂಜೆ 5 : 30 ಗಂಟೆಗೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿನಂದನಾ ಭಾಷಣ ಮಾಡುವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ . ಚಂದ್ರಶೇಖರ ಕಂಬಾರ ಉಪಸ್ಥಿತಿತರಿರುವರು, ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ . ಜಿ . ಹೇಮಂತ್ ಕುಮಾರ್ ಹಾಜರಿರುವರು, ನಂತರ ವಿದ್ವಾನ್ ಮೈಸೂರು ಎಂ . ನಾಗರಾಜ್  ಹಾಗೂ ವಿದ್ವಾನ್ ಮೈಸೂರು ಎಂ . ಮಂಜುನಾಥ್ ರಿಂದ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಟ್ರಸ್ಟ್ ನ  ಪದಾಧಿಕಾರಿಗಳಾದ ಪ್ರೊ.ಎಂ.ಎಸ್.ಪಾಣಿನಿ, ಪ್ರೊ .ಎನ್.ಎಸ್.ಆನಂದ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

 

 

Leave a Reply

comments

Related Articles

error: