ಮೈಸೂರು

ಅಂತರರಾಜ್ಯ ದಂತಚೋರರ ಬಂಧನ

ಗುಂಡ್ಲುಪೇಟೆಯ ಪಟ್ಟಣ ಠಾಣೆ ಪೊಲೀಸರು ಮತ್ತು ರಾಜ್ಯ ರಕ್ಷಣಾ ಪಡೆ ಇನ್ಸಪೆಕ್ಟರ್ ನೇತೃತ್ವದ ತಂಡ ಮೂವರು ಅಂತಾರಾಜ್ಯ ದಂತಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ತಮಿಳುನಾಡಿನ ಗೂಡಲೂರು ನಿವಾಸಿಗಳಾದ  ಕುಂಜುಮಾನ್(50), ಸೋಮನ್ (51), ಕೇರಳದ ತ್ರಿಶೂರಿನ ಸ್ವೀಫಾನ್ ಎಂದು ಗುರುತಿಸಲಾಗಿದೆ.  ಇವರು ಬೆಂಗಳೂರಿನ ವ್ಯಾಪಾರಿಯೋರ್ವರಿಗೆ ಕೇರಳದಿಂದ ದಂತಗಳನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕೆ.ಎಚ್.ಬಿ ಬಡಾವಣೆಯ ಬಳಿ  ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿ ಅದರಲ್ಲಿ  ಲಕ್ಷಾಂತರ ರೂ.ಮೌಲ್ಯದ ದಂತಗಳು ಕಂಡು ಬಂದಿವೆ ಎನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

comments

Related Articles

error: