ಮೈಸೂರು

ಸುತ್ತೂರು ಶ್ರೀಕ್ಷೇತ್ರದಲ್ಲಿ ರಾಜೇಂದ್ರ ಶ್ರೀಗಳ ಜಯಂತಿ ಪ್ರಯುಕ್ತ ಶಿವ ದೀಕ್ಷಾ ಸಂಸ್ಕಾರ

ಮೈಸೂರು,ಆ.29:- ಆಗಸ್ಟ್ 29ರಂದು  ಅಂದರೆ  ಈ ದಿನ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 104ನೆಯ ಜಯಂತಿಯ ಶುಭಸಂದರ್ಭದಲ್ಲಿ ಮೈಸೂರಿನ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸೇವಾ ಟ್ರಸ್ಟ್  ನವರು ನಡೆಸುತ್ತಿರುವ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಉಚಿತ ವಿದ್ಯಾರ್ಥಿನಿಲಯದ ಸುಮಾರು 35 ವಿದ್ಯಾರ್ಥಿಗಳಿಗೆ    ಶ್ರೀ ಶಿವರಾತ್ರೀಶ್ವರ ಕರ್ತೃ ಗದ್ದುಗೆಯ ಪ್ರಾಂಗಣದಲ್ಲಿ ಶಿವದೀಕ್ಷಾ ಸಂಸ್ಕಾರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ, ಕರಡಿಗೆ, ಪುಸ್ತಕಗಳನ್ನು ನೀಡಲಾಯಿತು. ಶಿವದೀಕ್ಷಾ ಸಂಸ್ಕಾರವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನೆರವೇರಿಸಲಾಯಿತು. ವಿದ್ಯಾರ್ಥಿನಿಲಯದ ಟ್ರಸ್ಟಿಗಳಾದ ದುಗ್ಗಹಟ್ಟಿ ವಿ. ಮಲ್ಲಿಕಾರ್ಜುನಸ್ವಾಮಿ, ಅಕ್ಷಯ್ ಮಲ್ಲಪ್ಪ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥ್, ಎಸ್.ಶಿವಕುಮಾರಸ್ವಾಮಿ, ದುಗ್ಗಹಟ್ಟಿ ಪಿ.ವೀರಭದ್ರಪ್ಪ, ನಿಲಯ ಪಾಲಕರಾದ ಕೆ.ಬಿ. ಆನಂದಮೂರ್ತಿ ಇತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: