
ಮೈಸೂರು
ಅಪಾಯಕ್ಕೆ ಅಹ್ವಾನ ನೀಡುತ್ತಿರುವ ರಸ್ತೆಯಲ್ಲಿನ ಗುಂಡಿಯಲ್ಲಿ ಗಿಡನೆಟ್ಟು ಅಣುಕು ಪ್ರದರ್ಶನ
ಮೈಸೂರು,ಆ.29:- ಮೈಸೂರು ನಗರದ “ಅಗ್ನಿಶಾಮಕದಳ” ಬಳಿ ಇರುವ ರೈಲ್ವೆ ಸೇತುವೆಯ ಕೆಳ ರಸ್ತೆ ಯಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
“ವಿಶ್ವವಿಖ್ಯಾತ ಮೈಸೂರು ದಸರಾ” ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದು ಅಧಿಕಾರಿಗಳು ಗಮನಹರಿಸದೆ ಇರುವುದನ್ನು ಖಂಡಿಸಿ “ಕನ್ನಡ ಕ್ರಾಂತಿದಳ” ಹಾಗೂ “ಕನ್ನಡ ಸೇನೆ” ವತಿಯಿಂದ ರಸ್ತೆಯಲ್ಲಿರುವ ಗುಂಡಿಯಲ್ಲಿ “ಗಿಡ ನೆಡುವುದರ” ಮೂಲಕ ಅಣುಕು ಪ್ರದರ್ಶನ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಸತ್ಯಪ್ಪ, ಸಮಾಜ ಸೇವಾಕರಾದ ಆಟೋ ಮಹೇಶ್, ಕನ್ನಡ ಕ್ರಾಂತಿ ದಳದ ಯುವ ಘಟಕದ ಅಧ್ಯಕ್ಷರಾದ ತೇಜಸ್ವಿ ಕುಮಾರ್, ಕನ್ನಡ ಸೇನೆ ಯ ಪಳನಿ, ನಿವಾಸ್ ಮೂರ್ತಿ, ಹಾಗೂ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)