ಪ್ರಮುಖ ಸುದ್ದಿ

ಚಿಕ್ಕಮ್ಮನ ಮನೆಯಲ್ಲೇ ಕಳ್ಳತನ : ಆರೋಪಿಯ ಬಂಧನ

ರಾಜ್ಯ( ಮಡಿಕೇರಿ) ಆ.29 :- ಅಮ್ಮತ್ತಿ ಕಾರ್ಮಾಡು ಗ್ರಾಮದ ಜಾನಕಿ ಎಂಬುವವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ ಚೋರನ ಬಂಧನವಾಗಿದೆ. ಆ.26 ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ವಿನೋದ್ ಎಂಬಾತನನ್ನು ಬಂಧಿಸಿದ್ದಾರೆ.
ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಸಮೀಪದ ಮನೆಯ ನಿವಾಸಿ ಭಾಸ್ಕರ ಎಂಬುವವರ ಪುತ್ರ ವಿನೋದ್ ವಿನು(37)ವನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನ ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನ್ನ ಚಿಕ್ಕಮ್ಮ ಜಾನಕಿ ಅವರ ಮನೆಯಲ್ಲಿದ್ದ ಸುಮಾರು 48 ಗ್ರಾಂ ತೂಕದ ಚಿನ್ನದ ಎರಡು ಬಳೆ ಮತ್ತು 80 ಸಾವಿರ ರೂ. ನಗದನ್ನು ವಿನೋದ್ ದೋಚಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕ್ಯಾತೇಗೌಡ, ಠಾಣಾಧಿಕಾರಿ ವೀಣಾನಾಯಕ್, ಎಎಸ್‍ಐ ಶ್ರೀಧರ್‍ನಾಣಿಯಪ್ಪ, ರಾಮಪ್ಪ, ಶ್ರೀನಿವಾಸ, ರವಿಕುಮಾರ್, ಅಪಾರಾಧ ಪತ್ತೆದಳದ ಸಿಬ್ಬಂದಿಗಳಾದ ಎಂ.ಚಂದ್ರಶೇಖರ್, ಚಾಲಕ ಗೋಪಿನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: