ಮೈಸೂರು

ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ: ಮತ್ತೋರ್ವ ಪರಾರಿ

ಮೈಸೂರು ನಗರ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತನನ್ನು ಬೆಲವತ್ತ ಗ್ರಾಮದ ನಿವಾಸಿ ಅವಿನಾಶ್ (24) ಎಂದು ಗುರುತಿಸಲಾಗಿದೆ. ಅಶೋಕ್ ಅಲಿಯಾಸ್ ಗಜ ತಪ್ಪಿಸಿಕೊಂಡವನಾಗಿದ್ದಾನೆ. ನಗರದ ಸಯ್ಯಾಜಿರಾವ್ ರಸ್ತೆಯ ಬಳಿ ಆರೋಪಿಗಳು ಕಪ್ಪು ಬಣ್ಣದ ಕ್ಯಾರಿಬ್ಯಾಗ್ ಹಿಡಿದು ನಿಂತಿದ್ದು, ಗಸ್ತಿನಲ್ಲಿದ್ದ ಸಿಸಿಬಿ ಇನ್ಸಪೆಕ್ಟರ್ ಪ್ರಸನ್ನ ಕುಮಾರ್ ಮತ್ತವರ ತಂಡವನ್ನು ನೋಡುತ್ತಿದ್ದಂತೆ  ಬೆದರಿ ಓಡಲು ಆರಂಭಿಸಿದ್ದರು. ಇದರಿಂದ ಅನುಮಾನಗೊಂಡ ಸಿಸಿಬಿ ಪೊಲೀಸರು ಆರೋಪಿಗಳ ಬೆನ್ನಟ್ಟಲಾಗಿ ಓರ್ವ ಸಿಕ್ಕಿಹಾಕಿಕೊಂಡಿದ್ದಾನೆ. ಬಂಧಿತನಿಂದ 200ಗ್ರಾಂ ಗಾಂಜಾ, 350ರೂ. ನಗದು ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: