ಪ್ರಮುಖ ಸುದ್ದಿಮೈಸೂರು

ಕುಮಾರಸ್ವಾಮಿ  ಮುಖ್ಯಮಂತ್ರಿಯಾಗಲ್ಲ ಎಂದವನು ಜೊಲ್ಲು ಸುರಿಸಿಕೊಂಡು ಅವನ ಪಕ್ಕಾನೆ ಕುಳಿತಿದ್ದ : ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ತಿರುಗೇಟು

ಮೈಸೂರು, ಆ.30:-  ಮಧ್ಯಂತರ ಚುನಾವಣೆ ಖಚಿತ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಂಸದ ಶ್ರೀನಿವಾಸ್​ ಪ್ರಸಾದ್​ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದದರಾಮಯ್ಯ ಹೇಳಿದ್ದು ಯಾವುದಾದರೂ ನಿಜವಾಗಿದೆಯಾ   ಕುಮಾರಸ್ವಾಮಿ  ಮುಖ್ಯಮಂತ್ರಿಯಾಗಲ್ಲ ಎಂದವನು ಜೊಲ್ಲು ಸುರಿಸಿಕೊಂಡು ಅವನ ಪಕ್ಕಾನೆ ಕುಳಿತಿದ್ದ. ನಿಮ್ಮಪ್ಪರಾಣೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲ್ಲ ಎಂದಿದ್ದ ಈಗೇನಾಗಿದೆ,” ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಸಂಸದರು “ನೀವಿಬ್ಬರು ನೆಟ್ಟಗೆ ಅಧಿಕಾರ ಮಾಡಿದ್ರೆ ಇಂತಹ ಪರಿಸ್ಥಿತಿ ಯಾಕೆ ಬರುತ್ತಿತ್ತು. ಈಗ ಮಧ್ಯಂತರ ಚುನಾವಣೆ ಬರುತ್ತೆ ಅಂತಿದ್ದೀರಾ. ನಿಮ್ಮಿಬ್ರ ಕಿತ್ತಾಟವನ್ನು ಜನ ನೋಡುತ್ತಿದ್ದಾರೆ,” ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ನಡೆಯುತ್ತಿದೆ. ಬಿಜೆಪಿ ಅತಿಥಿ ಸತ್ಕಾರ ಮಾಡುತ್ತಿದೆ ಎಂಬ ಶಾಸಕ ಎಸ್​.ಎ.ರಾಮದಾಸ್​ ಹೇಳಿಕೆಗೆ ​ ಚಾಟಿ ಏಟು ನೀಡಿದ ಅವರು . “ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯ ಕಾರಣ ಯಾರು ಎಂಬುದು ಆತನಿಗೆ ಗೊತ್ತಾ? ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯಲು 17 ಜನ ಅತಿಥಿಗಳೇ ಕಾರಣ.

ಅವರು ಬರಲಿಲ್ಲ ಅಂದಿದ್ದರೆ, ಇವರು ಅತಿಥಿ ಸತ್ಕಾರವನ್ನೂ ಮಾಡುವಂತೆಯೂ ಇರಲಿಲ್ಲ, ಸರ್ಕಾರ ಮಾಡಲೂ ಸಾಧ್ಯವಾಗುತ್ತಿರಲಿಲ್ಲ.‌ ಈ ವಿಚಾರವನ್ನು ಮೊದಲು ರಾಮದಾಸ್ ಅರ್ಥ ಮಾಡಿಕೊಳ್ಳಬೇಕು,” ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: