ಪ್ರಮುಖ ಸುದ್ದಿಮೈಸೂರು

ಸೈಕಲ್ ಪ್ಯೂರ್‍ ಅಗರ್‍ ಬತ್ತಿಯಿಂದ ನೈವೇದ್ಯ ಗಣೇಶ ಚತುರ್ಥಿ ಪೂಜಾ ಪ್ಯಾಕ್  ಬಿಡುಗಡೆ

ಬೆಂಗಳೂರು/ಮೈಸೂರು, ಆ.30:- ಅಗರ್‍ ಬತ್ತಿ ತಯಾರಿಕೆಯಲ್ಲಿ ಪ್ರಮುಖ ಕಂಪನಿಯಾಗಿರುವ ಎನ್‍ಆರ್‍ ಗ್ರೂಪ್‍ ನ ಸೈಕಲ್ ಪ್ಯೂರ್‍ಅಗರ್‍ ಬತ್ತಿಯು ಗಣೇಶ ಚತುರ್ಥಿ ಅಂಗವಾಗಿ ಗ್ರಾಹಕರಿಗೆ ಪೂಜೆಯನ್ನು ಸುಲಭ ಮಾಡಿ ಕೊಡುವ ಉದ್ದೇಶದಿಂದ ವಿನೂತನವಾದ`ನೈವೇದ್ಯಗಣೇಶಚತುರ್ಥಿ ಪೂಜಾ ಪ್ಯಾಕ್’ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಪರಿಸರ ಸ್ನೇಹಿ ಪ್ಯಾಕ್‍ ಆಗಿದ್ದು, ಭಕ್ತರ ಅನುಕೂಲ ಮತ್ತು ವಿಶೇಷ ಅನುಭವಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಈ ಕಿಟ್‍ ಅತ್ಯುತ್ಕೃಷ್ಠವಾದ ಉತ್ಪನ್ನಗಳನ್ನು ಖಾತರಿ ಪಡಿಸಲಿದೆ. ಇದರಲ್ಲಿನ ವಿಶೇಷತೆಯೆಂದರೆ ಗಣೇಶನ ಪೂಜೆಯನ್ನು ಹಂತ ಹಂತವಾಗಿ ಸಂಪ್ರದಾಯ ಬದ್ಧವಾಗಿ ನೆರವೇರಿಸಲು ಸೂಕ್ತ ಮಾರ್ಗದರ್ಶನ ಮಾಡುವ ಸಿಡಿಯನ್ನೂ ಅಡಕ ಮಾಡಲಾಗಿದೆ. ಇದು ಗ್ರಾಹಕರ ಎಲ್ಲಾ ಪೂಜೆಯ ಅಗತ್ಯತೆಗಳನ್ನು ಪೂರೈಸಲಿದೆ. ಮನೆಯಿಂದ ಹೊರಗಿರುವ ಯುವ ಪೀಳಿಗೆಯಾಗಲಿ, ಉದ್ಯೋಗಸ್ಥ ಅಥವಾ ಗೃಹಿಣಿಯರಾಗಿರಲಿ ಅಥವಾ ಮೊದಲ ಬಾರಿಗೆ ಗಣೇಶ ಪೂಜೆಯನ್ನು ಕೈಗೊಳ್ಳುವ ಹೊಸದಾಗಿ ಮದುವೆಯಾದ ದಂಪತಿಯಾಗಿರಲಿ  ಹೀಗೆ ಪ್ರತಿಯೊಬ್ಬರಿಗೂ ಪೂಜೆಗೆ ಅನುಕೂಲವಾಗುವಂತಹ ಪೂಜಾ ಸಾಮಗ್ರಿಗಳನ್ನು ಈ ವಿಶೇಷ ಪ್ಯಾಕ್ ಒಳಗೊಂಡಿರುತ್ತದೆ.

ಈ ನೈವೇದ್ಯ ಗಣೇಶ ಚತುರ್ಥಿ ಪ್ಯಾಕ್ ಬಗ್ಗೆ ಮಾತನಾಡಿದ ಸೈಕಲ್ ಪ್ಯೂರ್‍ ಅಗರ್‍ ಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‍ ರಂಗ ಮಾತನಾಡಿ “ನಾವು ನಮ್ಮ ಗ್ರಾಹಕರನ್ನು ಅವರ ಮಾರ್ಗಗಳ ಹತ್ತಿರದಲ್ಲಿಯೇ ಇರುವಂತೆ ಮಾಡುತ್ತಿದ್ದೇವೆ ಮತ್ತು ನಮ್ಮ ಸಂಪ್ರದಾಯಗಳು, ಸಂಸ್ಕೃತಿಯನ್ನು ನಮ್ಮ ಭವಿಷ್ಯದ ಪೀಳಿಗೆಗಳು ಸಹ ಶುದ್ಧ ರೂಪದಲ್ಲಿ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ತಜ್ಞ ವಿದ್ವಾಂಸರು, ಪುರೋಹಿತರು ಮತ್ತು ಪವಿತ್ರ ಗ್ರಂಥಗಳೊಂದಿಗೆ ನಿಕಟವಾಗಿರುವ ಮಾಹಿತಿಗಳ ಮಾರ್ಗದರ್ಶನದೊಂದಿಗೆ ಈ ಪವಿತ್ರವಾದ ಪೂಜಾ ಪ್ಯಾಕ್‍ ಅನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ವಯೋಮಾನದ ಭಕ್ತರೂ ಪೂಜಾರತಿಯನ್ನುಕ್ರಮಬದ್ಧ ಮತ್ತು ನಿಖರವಾದ ವಿಧಾನದಲ್ಲಿ ಕೈಗೊಳ್ಳಲು ನೆರವಾಗುತ್ತದೆ’’ ಎಂದು ತಿಳಿಸಿದರು.

ಎಲ್ಲರಿಗೂ ಗಣೇಶಚತುರ್ಥಿಯ ಶುಭಾಶಯಗಳು ಮತ್ತು ಈ ಪೂಜಾ ಪ್ಯಾಕ್‍ನೊಂದಿಗೆ ಅವರ ಮನೆಗಳನ್ನು ಅನುಗ್ರಹಿಸಲು ಮತ್ತು ಅವರ ಇಷ್ಟಾರ್ಥಗಳ ಸಿದ್ಧಿಯ ಅನುಭವವನ್ನು ನೀಡಲಿ ಎಂದು ಆಶಿಸುತ್ತೇವೆ’’ ಎಂದರು.

ಪೂಜಾ ಪ್ಯಾಕ್‍ನಲ್ಲಿ   ಹರಿದ್ರಾ (ಅರಿಶಿಣ), ಕುಂಕುಮ, ಪೂಜಾ ಅಕ್ಷತಾ, ಪೂಜಾಘಂಟೆ, ಘಂಟೆಯ ಪೀಠ, ಯಜ್ಞೋಪವೀತ (ಗಣೇಶನಿಗೆ), ವಸ್ತ್ರ (ಗಣೇಶನಿಗೆ), ಅಗರಬತ್ತಿ, ದೀಪ, ಪುಗಿಫಾಲಾ, ಕರ್ಪೂರ, ಆರತಿ ಮಾಡುವಕರ್ಪೂರ ಹೋಲ್ಡರ್, ಕಪ್ ಸಾಂಬ್ರಾಣಿ, ಕಪ್ ಸಾಂಬ್ರಾಣಿ&ಅಗರ್‍ಬತ್ತಿ ಹೋಲ್ಡರ್, ಭಸ್ಮ, ಗೋಪಿಮೃತ್ತಿಕೆ, ಚಂದನದ ಉಂಡೆಗಳು, ಕಂಕಣ, ರಂಗೋಲಿ ಪುಡಿ, ರಂಗೋಲಿ ಸ್ಟೆನ್ಸಿಲ್, ತೋರಣ, ಬುಕ್‍ಲೆಟ್, ಮಣ್ಣಿನಗಣೇಶ, ಮತ್ತು ಪೂಜೆ ಮಾರ್ಗದರ್ಶನ ನೀಡುವ ಸಿಡಿ. ಈ ವಿಶೇಷ ಪ್ಯಾಕ್ ಮಾರುಕಟ್ಟೆಯಲ್ಲಿ ಲಭ್ಯವಿದೆಯಲ್ಲದೇ, ವೆಬ್‍ಸೈಟ್https://www.cycle.in ಮೂಲಕವೂ ತರಿಸಿಕೊಳ್ಳಬಹುದಾಗಿದೆ. (ಎಸ್.ಎಚ್)

Leave a Reply

comments

Related Articles

error: