ಕ್ರೀಡೆ

ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದ ಅಭಿಷೇಕ್ ವರ್ಮಾ, ಸೌರಭ್ ಚೌಧರಿಗೆ ಕಂಚು

ರಿಯೋ ಡಿ ಜನೈರೊ,.30- ಶೂಟಿಂಗ್ ವಿಶ್ವಕಪ್ನಲ್ಲಿ ಭಾರತದ ಶೂಟರ್ ಗಳಾದ ಅಭಿಷೇಕ್ ವರ್ಮಾ ಹಾಗೂ ಸೌರಭ್ ಚೌಧರಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಜಯಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್ ಪುರುಷರ 10 ಮೀ. ಪಿಸ್ತೂಲ್ ಇವೆಂಟ್ನಲ್ಲಿ ವರ್ಮಾ 8 ಸ್ಪರ್ಧಿಗಳಿದ್ದ ಫೈನಲ್ನಲ್ಲಿ 244.2 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ಚೌಧರಿ 221.9 ಅಂಕ ಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡರು. ಬೆಳ್ಳಿ ಪದಕ ಟರ್ಕಿಯ ಇಸ್ಮಾಯೀಲ್ ಕೆ.(243.1)ಅವರ ಪಾಲಾಯಿತು.

ವರ್ಮಾ ಹಾಗೂ ಚೌಧರಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಚೌಧರಿ(584 ಅಂಕ) ಹಾಗೂ ವರ್ಮಾ(582 ಅಂಕ) ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನದೊಂದಿಗೆ ಫೈನಲ್ಗೆ ಪ್ರವೇಶಿಸಿದ್ದರು. ಪ್ರಸ್ತುತ ವಿಶ್ವಕಪ್ನಲ್ಲಿ ಭಾರತ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಯುವ ಶೂಟರ್ ಎಲವೆನಿಲ್ ವಲರಿವನ್ ಟೂರ್ನಿಯ ಮೊದಲ ದಿನ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಸಂಜೀವ್ ರಾಜ್ಪೂತ್ ಪುರುಷರ 50 ಮೀ.ರೈಫಲ್ 3 ಪೊಸಿಶನ್ಸ್ನಲ್ಲಿ ಬೆಳ್ಳಿ ಪದಕವನ್ನು ಗಿಟ್ಟಿಸಿಕೊಂಡು ಭಾರತದ ಒಲಿಂಪಿಕ್ಸ್ ಕೋಟಾವನ್ನು ಭರ್ತಿ ಮಾಡಿದರು. (ಎಂ.ಎನ್)

Leave a Reply

comments

Related Articles

error: