ಪ್ರಮುಖ ಸುದ್ದಿಮೈಸೂರು

ನಾಳೆ ಬನ್ನಿಮಂಟಪದವರೆಗೂ ಗಜಪಡೆ ಸಾಗಲಿದೆ : ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಮೈಸೂರು,ಆ.30:-   ಗಜಪಡೆ ತಾಲೀಮು ನಾಳೆ ಬನ್ನಿಮಂಟಪದವರೆಗೂ ಸಾಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಅವರಿಂದು ಜಲದರ್ಶಿನಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ – 2019, ಅರ್ಜುನ ನೇತೃತ್ವದ ಆರು ಆನೆಗಳಿಂದ ಈಗಾಗಲೇ ತಾಲೀಮು ಆರಂಭವಾಗಿದ್ದು, ನಾಳೆ ಗಜಪಡೆ ಜೊತೆ ತಾಲೀಮು ನಡೆಯಲಿದೆ. ಮೈಸೂರಿನ ಅರಮನೆ ಮುಂಭಾಗದಿಂದ ಬನ್ನಿ ಮಂಟಪದವರೆಗೆ ಸಾಗಲಿದ್ದು, ನಾನೂ ಜೊತೆಯಲ್ಲಿ ಇರಲಿದ್ದೇನೆ. ಇದೇ ಮೊದಲ ಬಾರಿಗೆ ವಿಶೇಷವಾಗಿ ಗಜಪಡೆ ಜೊತೆ ತಾಲೀಮು ನಡೆಸಲಾಗಿದ್ದು, ವಿಶೇಷವಾಗಿ ದಸರಾ ಆಚರಿಸಲಾಗುವುದು ಎಂದರು.

ಬೆಳಿಗ್ಗೆ  ಚಾಮುಂಡೇಶ್ವರಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ತುಂಬ ಅಭಿವೃದ್ಧಿ ಆಗಬೇಕಿದೆ. ದಾಸೋಹ ಭವನ ಚಿಕ್ಕದಿದೆ, ಭಕ್ತರು ಪ್ರಸಾದ ಸ್ವೀಕರಿಸುವಾಗ ತೊಂದರೆಯಾಗುತ್ತಿದೆ. ಆದ್ದರಿಂದ ಬೇರೆ ಸ್ಥಳದಲ್ಲಿ ದಾಸೋಹ ಭವನ ನಿರ್ಮಾಣಕ್ಕೆ  ಮುಂದಾಗುತ್ತೇನೆ. ದಸರಾ ನಂತರ ಚರ್ಚಿಸಿ ದಾಸೋಹ ನಿರ್ಮಾಣದ ಸಾಧಕ ಬಾಧಕಗಳನ್ನು ಚರ್ಚಿಸೋಣ ಎಂದರು.

ಪ್ರತಿ ವರ್ಷ ಸ್ತಬ್ಥ ಚಿತ್ರಗಳು ಅದದೇ ಆಗಮಿಸುತ್ತದೆ. ಬದಲಿ ಸ್ತಬ್ಥ ಚಿತ್ರಗಳು ಆಗಬೇಕೆಂದು,ಮೈಸೂರಿನವರೇ ಟೆಂಡರ್ ತೆಗೆದುಕೊಳ್ಳುತ್ತಾರೆ, ಬೇರೆಯವರಿಗೆ ಅವಕಾಶವೇ ಸಿಕ್ಕಲ್ಲ, ವಸ್ತು ಪ್ರದರ್ಶನದಲ್ಲಿರುವ ಆಹಾರ ಮಳಿಗೆ,ಫನ್ ವರ್ಡ್ ಸೇರಿದಂತೆ ಇತರೆ ಮಳಿಗೆಗಳ ಟೆಂಡರ್ ಒಬ್ಬರಿಗೆ ಪ್ರತಿ ವರ್ಷ ಸಿಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ  ಬದಲಿ ಸ್ತಬ್ಥ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದರು.  ಟೆಂಡರ್ ಕುರಿತು ಚರ್ಚಿಸುತ್ತೇನೆ ಎಂದರು. ಮಾಧ್ಯಮ ಪಾಸ್ ವ್ಯವಸ್ಥೆ ವಿಚಾರಕ್ಕೆ ಪ್ರತಿಕ್ರಿಯಿಸಿ  ದಸರಾ ಆರಂಭಕ್ಕೂ ಮುನ್ನ ಮಾಧ್ಯಮದವರಿಗೆ ಪಾಸ್ ವ್ಯವಸ್ಥೆ ಮಾಡಿಕೊಡ್ತೀನಿ. ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರಳಲು ಅವಕಾಶ ಮಾಡಿಕೊಡ್ತೀನಿ. ಎಲ್ಲೂ ಮಾಧ್ಯಮದವರನ್ನು ತಡೆಯದಂತೆ ಪೊಲೀಸಿನವರಿಗೆ ಸೂಚಿಸುತ್ತೇನೆ ಎಂದರು.

ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮ ನಡೆಯುವ ವೇಳೆ  ಮಳೆ ಬಂದ ಸಂದರ್ಭದಲ್ಲಿ ನೆನೆಯುವ ಸಂದರ್ಭ ಎದುರಾಗಿದೆ. ಈ ಸಮಸ್ಯೆ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ,  ಮಾಜಿ ಸಚಿವ ಶಿವಣ್ಣ, ನಗರಾಧ್ಯಕ್ಷ ಡಾ.ಮಂಜುನಾಥ್ ಬಿ.ಹೆಚ್. ಹೆಚ್.ವಿ.ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: