ಮೈಸೂರು

ಹುಲಿಗಳ ದತ್ತು ಸ್ವೀಕಾರ ನವೀಕರಿಸಿದ ಪ್ರಶಾಂತ್ ಅಯ್ಯಂಗಾರ್ ದಂಪತಿ

ಮೈಸೂರು,ಆ.30:- ಪುಣೆಯ ಪ್ರಶಾಂತ್ ಎಸ್. ಅಯ್ಯಂಗಾರ್ ಮತ್ತು ಗೀತಾ ಎಸ್.ಅಯ್ಯಂಗಾರ್ ಅವರು ಮೈಸೂರು ಮೃಗಾಲಯದ ಎರಡು ಹುಲಿಗಳನ್ನು ಯೋಗಾಚಾರ್ಯರಾದ ದಿ.ಬಿ.ಕೆ.ಎಸ್.ಅಯ್ಯಂಗಾರ್ ಅವರ ಸ್ಮರಣಾರ್ಥ ದತ್ತು ಪಡೆದಿದ್ದು, 17/08/209ರಿಂದ 16/08/2020ರ ಮತ್ತೊಂದು ವರ್ಷದ ಅವಧಿಗೆ 2,00,000ರೂ.ಗಳನ್ನು ಪಾವತಿಸಿ ದತ್ತು ಸ್ವೀಕಾರ ನವೀಕರಿಸಿದ್ದಾರೆ.

2009ರಿಂದ ಇವರು ಮೈಸೂರು ಮೃಗಾಲಯದ ಪ್ರಾಣಿಗಳನ್ನು ಸತತವಾಗಿ ದತ್ತು ಸ್ವೀಕರಿಸುತ್ತಾ ಬಂದಿರುವುದಕ್ಕೆ ಇವರುಗಳಿಗೆ ಮೈಸೂರು ಮೃಗಾಲಯವು ಆಬಾರಿಯಾಗಿರುತ್ತದೆ ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಪ್ರಶಾಂತ್ ಎಸ್. ಅಯ್ಯಂಗಾರ್ ಮತ್ತು ಗೀತಾ ಎಸ್.ಅಯ್ಯಂಗಾರ್ ಇವರು ಸ್ವತಃ ಪ್ರಾಣಿ ಪಕ್ಷಿ ಪ್ರಿಯರಾಗಿದ್ದು, ಮೈಸೂರು ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳ ಬಗ್ಗೆ ವಿಶೆಷ ೊಲವು, ಕಾಳಜಿ ಹಾಗೂ ಹಿತಾಸಕ್ತಿ ಹೊಂದಿರುವ ಪೋಷಕರಾಗಿದ್ದಾರೆ. (ಎಸ್.ಎಚ್)

Leave a Reply

comments

Related Articles

error: