ಸುದ್ದಿ ಸಂಕ್ಷಿಪ್ತ

ಸೆ.3ರಂದು ಪಾರಂಪರಿಕ ಸಂಗೀತೋತ್ಸವ

ಮೈಸೂರು,ಆ.30 : ಎಸ್.ಪಿ.ವಿ.ಜಿ.ಎಂ.ಸಿ ಟ್ರಸ್ಟ್ ವತಿಯಿಂದ 58ನೇ ಪಾರಂಪರಿಕ ಸಂಗೀತೋತ್ಸವ ಉದ್ಘಾಟನೆಯನ್ನು ಸೆ.3ರ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.

ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಮುಖ್ಯ ಅತಿಥಿಯಾಗಿರುವರು, ಎಂ.ಜಗನ್ನಾಥ ಶೆಣೈ ಅಧ್ಯಕ್ಷತೆ. ನಂತರ ತ್ರಿಚೂರು ಸಹೋದರರಿಂದ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ.

ರಾಮಲಲಿತ ಕಲಾ ಮಂಡಳಿ ಸಹಯೋಗದೊಂದಿಗೆ  ಸೆ. 10ರಂದು ಸಂಜೆ 6 ಗಂಟೆಗೆ ಜಯಚಾಮರಾಜೇಂದ್ರ ಒಡೆಯರ್ ಶತಮಾನೋತ್ಸವವನ್ನು ಹಮ್ಮಿಕೊಂಡಿದ್ದು, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ನಿರ್ದೇಶಕಿ ಜಾನಕಿ ಮುಖ್ಯ ಅತಿಥಿಯಾಗಿರುವರು.  (ಕೆ.ಎಂ.ಆರ್)

Leave a Reply

comments

Related Articles

error: