ದೇಶ

ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿಗೆ ಬಂಧನ ವಾರಂಟ್

ಅಮರಾವತಿ,ಆ.30- ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿಗೆ ಜಾಮೀನು ರಹಿತ ಬಂಧನ ವಾರಂಟ್ ಜರಿಗೊಳಿಸಿದೆ.

ನಾಲ್ಕು ವರ್ಷಗಳ ಹಿಂದೆ ನಡೆದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಾರಂಟ್ ಜಾರಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೆ, ನೋಟಿಸ್ ಗೆ ಉತ್ತರವನ್ನೂ ನೀಡಿರಲಿಲ್ಲ.

2014 ತೆಲಂಗಾಣ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ವ್ಯಾರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ರಾಮ್ಜಿ ನಾಯ್ಕ್ ಅವರ ಬಳಿ 1.20 ಕೋಟಿ ರೂ. ರೇಣುಕಾ ಚೌಧರಿ ತೆಗೆದುಕೊಂಡಿದ್ದರು ಎಂದು ರಾಮ್ಜೀ ಪತ್ನಿ ಭುಕ್ಯಾ ಚಂದ್ರಕಲಾ ಆರೋಪಿಸಿದ್ದರು.

ಆದರೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ದೊರೆಯದೆ ಇದ್ದರೂ, ಹಣವನ್ನು ರೇಣುಕಾ ಚೌಧರಿ ವಾಪಸ್ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ. ಟಿಕೆಟ್ ವಂಚಿತರಾದ ನಂತರ ಖಿನ್ನತೆ ಅನುಭವಿಸುತ್ತಿದ್ದ ರಾಮ್ಜೀ ನಾಯ್ಕ್ 2014 ಅಕ್ಟೋಬರ್ 14 ರಂದು ನಿಧನರಾಗಿದ್ದರು. (ಎಂ.ಎನ್)

Leave a Reply

comments

Related Articles

error: