ದೇಶಪ್ರಮುಖ ಸುದ್ದಿ

ನಗದು ಮೂಲಕ ಆಭರಣ ಖರೀದಿ ಮೇಲೆ ಶೇ.1 ಹೆಚ್ಚುವರಿ ತೆರಿಗೆ

ನವದೆಹಲಿ : ನಗದು ನೀಡಿ ಆಭರಣ ಖರೀದಿಸಿದರೆ ಶೇ.1ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರವು ನಿರ್ಧಾರ ಕೈಗೊಂಡಿದ್ದು, ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ.

2017 ರ ವಿತ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಅದರಂತೆ ನಗದು ಹಣ ನೀಡಿ ಆಭರಣ ಖರೀದಿ ಮಾಡುವವರು ಈಗ ಪಾವತಿಸುವ ತೆರಿಗೆಗಳೊಂದಿಗೆ ಹೆಚ್ಚುವರಿಯಾಗಿ ಶೇ.1ರಷ್ಟು ತೆರಿಗೆ ಪಾವತಿ ಮಾಡಬೇಕಿದೆ. ಕೇಂದ್ರ ಸರ್ಕಾರಿ ಮೂಲಗಳ ಪ್ರಕಾರ 2 ಲಕ್ಷಕ್ಕೂ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ನಗದು ಹಣ ಬಳಕೆ ಮಾಡಿದರೆ ಆಗ ಶೇ.1ರಷ್ಟು ಹೆಚ್ಚುವರಿ ತೆರಿಗೆ ನೀಡಬೇಕಾಗುತ್ತದೆ. ಆದರೆ ಈ ನಿಯಮ ನಗದು ರಹಿತ ಆಭರಣ ಖರೀದಿ ಮಾಡುವವರಿಗೆ ಅನ್ವಯವಾಗುವುದಿಲ್ಲ. ಏಪ್ರಿಲ್ 1 ರಿಂದ ನಿಯಮ ಜಾರಿಗೆ ಬರಲಿದೆ.

ಈ ಹಿಂದೆ ಇದ್ದ ನಿಯಮದಂತೆ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದರೆ ಆಗ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ ಹೊಸ ನಿಯಮದಂತೆ 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದರೆ ಶೇ.1ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು.

Leave a Reply

comments

Related Articles

error: