ಮೈಸೂರು

ಆರ್‍ .ಎಸ್.ಎಸ್ ಹಿರಿಯ ಪ್ರಚಾರಕ ಮೈ.ಚ.ಜಯದೇವ್ ನಿಧನ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿರಿಯ ಪ್ರಚಾರಕ ಮೈ.ಚ.ಜಯದೇವ್ (85) ಅವರು ಇಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದಾಗಿ ಕಳೆದ ಹಲವಾರು ದಿನಗಳಿಂದ ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಪಾರ್ಥಿವ ಶರೀರವನ್ನು ಬೆಳಿಗ್ಗೆ 12 ಗಂಟೆಯಿಂದ 5ರವರೆಗೆ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಆರ್‍ ಎಸ್ ಎಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಇರಿಸಲಾಗಿದ್ದು ಸಂಜೆ 5ಕ್ಕೆ ಶ್ರದ್ಧಾಂಜಲಿ ಸಭೆಯನ್ನು ರಾಷ್ಟ್ರೀಯ ಸ್ವಯಂ ಸೇವಕರು ನಡೆಸಲಿದ್ದಾರೆ.  ನಂತರ ಫೆ.21ರ ಸಂಜೆ 3ಕ್ಕೆ ಮೈಸೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

 

Leave a Reply

comments

Related Articles

error: