ದೇಶ

ಚಂದ್ರಯಾನ – 2 ಇಳಿಕೆ ವೀಕ್ಷಣೆ: ಪ್ರಧಾನಿ ಮೋದಿಯೊಂದಿಗೆ ಲಕ್ನೋ ಹುಡುಗಿ ಭಾಗಿ

ಲಕ್ನೋ,ಆ.31- ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚಂದ್ರನ ಅಂಗಳದಲ್ಲಿ ಚಂದ್ರಯಾನ – 2 ನೌಕೆ ಇಳಿಯುವುದನ್ನು ವೀಕ್ಷಿಸಲು ದೇಶಾದ್ಯಂತದ 60 ಮಕ್ಕಳು ಆಯ್ಕೆಯಾಗಿದ್ದಾರೆ.

ಆ 60 ಮಕ್ಕಳಲ್ಲಿ ದೆಹಲಿ ಪಬ್ಲಿಕ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ರಾಶಿ ವರ್ಮಾ ಆಯ್ಕೆಯಾಗಿರುವುದು ಉತ್ತರ ಪ್ರದೇಶವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

ಸೆ.7 ರಂದು ಬೆಳಿಗ್ಗೆ 01:55ಕ್ಕೆ ಪಿಎಂ ನರೇಂದ್ರ ಮೋದಿಯವರೊಂದಿಗೆ ಚಂದ್ರಯಾನ ನೌಕೆ ದಕ್ಷಿಣ ಧೃವದಲ್ಲಿ ಇಳಿಯುವುದನ್ನು ವೀಕ್ಷಿಸಲು ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯದಿಂದ ಆಯ್ಕೆ ಮಾಡಿದ್ದರೂ ಆ.10 ರಿಂದ 25 ರವರೆಗೆ ನಡೆಸಿದ ಆನ್‌ಲೈನ್ ವಿಜ್ಞಾನ ರಸಪ್ರಶ್ನೆಯ ಹಲವು ಸುತ್ತುಗಳ ನಂತರ ರಾಶಿ ವರ್ಮಾ ಅಂತಿಮವಾಗಿ ಆಯ್ಕೆಯಾಗಿದ್ದಾರೆ.

ರಾಶಿ ಅವರಲ್ಲದೆ, ಒಡಿಶಾ, ಜಾರ್ಖಂಡ್ ಮತ್ತು ಮೇಘಾಲಯದ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಈ ಅಪರೂಪದ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾಗಲಿದ್ದಾರೆ.

ಈ ಕುರಿತು ಮಾಧ್ಯಮ ಜೊತೆ ಮಾತನಾಡಿದ ರಾಶಿ, ಭವಿಷ್ಯದಲ್ಲಿ ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದೇನೆ. ನನಗೆ ಅವಕಾಶ ಸಿಕ್ಕರೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: