ಮೈಸೂರು

ಸೆ.3ರಿಂದ ರಂಗಸವ್ಯಸಾಚಿ ಯೋಗಣ್ಣ ಸ್ಮರಣೋತ್ಸವ : ಹಂಸಲೇಖರಿಂದ ಉದ್ಘಾಟನೆ

ಮೈಸೂರು,ಆ.31 : ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡದಿಂದ ಸೆ.3 ರಿಂದ 7ರವರೆಗೆ  ರಂಗಸವ್ಯಶಾಚಿ ಯೋಗಣ್ಣನವರ ಸ್ಮರಣೋತ್ಸವ, ರಂಗಗೀತೆ ಕಾರ್ಯಕ್ರಮ, ವಿಚಾರ ಸಂಕಿರಣ ಮತ್ತು ಹೆಚ್.ಕೆ.ಯೋಗಾನರಸಿಂಹರವರ ಐದು ನಾಟಕಗಳ ಪುಸ್ತಕ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ.

ಸೆ.5ರಂದು ಕಲಾಮಂದಿರದ ಕಿರುರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ನಾದಬ್ರಹ್ಮ ಡಾ.ಹಂಸಲೇಖ ಪುಸ್ತಕ ಬಿಡುಗಡೆಗೊಳಿಸುವರು, ನಾಡೋ ಬೆಳಗಲ್ಲು ವೀರಣ್ಣ ನಾಟಕೋತ್ಸವಕ್ಕೆ ಚಾಲನೆ ನೀಡುವರು, ಹಿರಿಯ ಕಲಾವಿದ ಪರಮಶಿವನ್ ಹಾಗೂ ಇತರರು ಹಾಜರಿರುವರು.

ಕಾರ್ಯಕ್ರಮಕ್ಕೂ ಪುಟ್ಟಣ್ಣಯ ಮತ್ತು ಕಿರಗಸೂರು ರಾಜಪ್ಪ ತಂಡದವರಿಂದ ‘ರಂಗಸಂಗೀತ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಾಟಕಗಳು : ಅಡುಗೆ ಭಟ್ಟ, ಭೂ ಕೈಲಸ, ಅಮೋಘ ವರ್ಷ ನೃಪತುಂಗ ನಾಟಕಗಳನ್ನು ಪ್ರದರ್ಶಿಸಲಾಗುವುದು.

‘ನಾಟಕ ಪರಂಪರೆ’ ಕುರಿತು ಮಹಾರಾಣಿ ಕಾಲೇಜಿನಲ್ಲಿ, ಮಹಾಜನ ಹಾಗೂ ಗೋಪಾಲಸ್ವಾಮಿ ಶಿಶುವಿಹಾರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ  ವಿಚಾರ ಸಂಕಿರಣ ಏರ್ಪಡಿಸಲಾಗಿದೆ.(ಕೆ.ಎಂ.ಆರ್)

Leave a Reply

comments

Related Articles

error: