ಮೈಸೂರು

ಪೌರ ಕಾರ್ಮಿಕರಿಗೆ ಬಾಗಿನ ಕೊಡುವ ಮೂಲಕ ಗೌರಿಗಣೇಶ ಹಬ್ಬ ಆಚರಿಸಿದ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್

 ಮೈಸೂರು,ಸೆ.1:- ಪೌರ ಕಾರ್ಮಿಕರಿಗೆ ಬಾಗಿನ ಕೊಡುವ ಮೂಲಕ ಪಾಲಿಕೆ ಸದಸ್ಯ ವಿ ರಾಮಪ್ರಸಾದ್ ಗೌರಿಗಣೇಶ ಹಬ್ಬವನ್ನು ಆಚರಿಸಿದರು.

ನಾಡಿನಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂತಸದಿಂದ ಆಚರಿಸಲಾಗುತ್ತಿದೆ. ಆದ್ರೆ ನಗರವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರು ಹಬ್ಬ ಆಚರಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.ಅಂತಹ ಮಹಿಳಾ ಪೌರಕಾರ್ಮಿಕರೊಂದಿಗೆ ವಾರ್ಡ್ ನಂ 55 ನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್ ಗೌರಿ ಹಬ್ಬವನ್ನು ಆಚರಿಸಿದ್ದಾರೆ.ತಮ್ಮ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಸುಮಾರು 50 ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿ ವಿಶೇಷವಾಗಿ ಹಬ್ಬ ಆಚರಿಸಿದ್ದಾರೆ.ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಮೂಲಕ ನೀಡಿದ್ದಾರೆ.

ಸೀರೆ,ಅರಿಶಿನ ಕುಂಕುಮ,ಬಳೆ, ಹಣ್ಣು,ಹೂವು ಇರುವ ಬಾಗಿನ ನೀಡಿ ಶುಭಾಶಯ ಕೋರಿದ್ದಾರೆ. ಇದೇ ವೇಳೆ
ಪೌರಕಾರ್ಮಿಕರಿಗೆ ಸಿಹಿ ತಿನಿಸಿ ಹಬ್ಬದ ಶುಭಾಶಯ ಕೋರಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ಆಚರಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸುಮ ರಾಮಪ್ರಸಾದ್, ವಾರ್ಡಿನ ಅಧ್ಯಕ್ಷ ಸಿ ಸಂದೀಪ್, ಮುಖಂಡರಾದ ಮಂಜುನಾಥ್, ಪುನೀತ್, ಶ್ರೀಕಂಠು, ಚೇತನ್, ಮಂಜುಳಾ, ರೇಣುಕಾ, ಅಶ್ವಿನಿ, ಬಾಲಚಂದ್ರ, ನಾಯ್ಕ್, ಭಾಸ್ಕರ್, ಧರ್ಮೇಂದ್ರ, ರಾಮಚಂದ್ರ, ಶಿವು, ತೀರ್ಥ, ಅರವಿಂದ, ಸೋಮೇಶ್, ದೇವೇಂದ್ರ ಸ್ವಾಮಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: