ಪ್ರಮುಖ ಸುದ್ದಿಮೈಸೂರು

ಎಂ. ಎಲ್. ಎ  ಹೋದಕಡೆ ನೀವೆಲ್ಲ  ಹೋಗ್ಬೇಕು, ಯಾಕೆ  ಹೋಗ್ತಿಲ್ವವಂತೆ ? : ಮಾಜಿ ಸಿಎಂ ಸಿದ್ದರಾಮಯ್ಯರಿಂದ ತಹಶೀಲ್ದಾರ್ ಗೆ ತರಾಟೆ

ಮೈಸೂರು,ಸೆ.1:- ಎಂ. ಎಲ್. ಎ  ಹೋದಕಡೆ ನೀವೆಲ್ಲ  ಹೋಗ್ಬೇಕು. ಯಾಕೆ  ಹೋಗ್ತಿಲ್ವವಂತೆ ಇದು ಮಾಜಿ ಸಿಎಂ ಸಿದ್ದರಾಮಯ್ಯ ತಹಶೀಲ್ದಾರ್ ಗೆ ತರಾಟೆ ತೆಗೆದುಕೊಂಡ ಪರಿ.

ಇಂದು ಮೈಸೂರು ಜಿಲ್ಲೆ ಟಿ. ನರಸೀಪುರ ತಹಶೀಲ್ದಾರ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡು, ಎಂ. ಎಲ್. ಎ  ಹೋದಕಡೆ ನೀವೆಲ್ಲ  ಹೋಗ್ಬೇಕು  ಯಾಕ್  ಹೋಗ್ತಿಲ್ವವಂತೆ. ಪ್ರೋಟೋಕಾಲ್  ಬಳಸಬೇಕು ಎಂದು ತಾಕೀತು ಮಾಡಿದರು.

ಈ ಹಿಂದೆ ಸಿದ್ದರಾಮಯ್ಯ ಪುತ್ರ ಶಾಸಕ ಯತಿಂದ್ರ ಸಿದ್ದರಾಮಯ್ಯ  ಕ್ಷೇತ್ರಕ್ಕೆ ಭೇಟಿ  ನೀಡಿದ ವೇಳೆ ತಹಶೀಲ್ದಾರ್ ಬಂದಿರ್ಲಿಲ್ಲ ಎಂದು ಸ್ಥಳೀಯರು ಸಿದ್ದರಾಮಯ್ಯಗೆ ದೂರು ನೀಡಿದರು. ಈ ಸಮಯದಲ್ಲಿ ಸ್ಥಳಕ್ಕೆ ತಹಶೀಲ್ದಾರ್ ರನ್ನು ಕರೆಸಿ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡರು.

ಏನಯ್ಯ  ನಂಗೆ (ಯತೀಂದ್ರ ಸಿದ್ಧರಾಮಯ್ಯ) ಅವ್ನು ಹೇಳಿಲ್ಲ,  ಇವ್ರೆಲ್ಲ ಹೇಳ್ತಿದ್ದಾರೆ. ಯಾಕ್ ನೀ ಬರಲ್ವಂತೆ ಯಾಕಯ್ಯ? ಎಂದು ತಹಶೀಲ್ದಾರ್ ಗೆ ಸಿದ್ಧರಾಮಯ್ಯ ಜಾಡಿಸಿದರು. ಇದೇ ವೇಳೆ ಇಲ್ಲಾ ಸರ್ ನಾನು ಬರ್ತಿದೀನಿ ಸರ್  ಅಂದ ತಹಶೀಲ್ದಾರ್ ಗೆ ಅದೆಲ್ಲ ನಂಗೆ  ಗೊತ್ತಿಲ್ಲ ಎಂ.ಎಲ್.ಎ ಎಲ್ಲಿ ಹೋಗ್ತಾರೆ  ಅಲ್ಲೆಲ್ಲ ನೀವ್ ಹೋಗ್ಬೇಕು  ಗೊತ್ತಾಯ್ತ.?  ಸರಿಯಾಗ್ ಕೆಲ್ಸ ಮಾಡಬೇಕು ಗೊತ್ತಾಯ್ತ?  ಎಂದು ತಹಶೀಲ್ದಾರ್ ಗೆ  ಸಿದ್ದರಾಮಯ್ಯ ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: