ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆ : ಫಿರಂಗಿಗಳಿಗೆ ಪೂಜೆ ಸಲ್ಲಿಸಿದ ಪೊಲೀಸ್ ಆಯುಕ್ತರು

ಮೈಸೂರು,ಸೆ.3:- ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತರು ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು.
ಅರಮನೆ ಆಡಳಿತ ಮಂಡಳಿಯಿಂದ ಪೊಲೀಸ್ ಇಲಾಖೆಗೆ ಫಿರಂಗಿಗಳ ಹಸ್ತಾಂತರಿಸಲಾಗಿದ್ದು,  ಗಣೇಶ ಚತುರ್ಥಿ ಹಿನ್ನಲೆ ನಿನ್ನೆ ಫಿರಂಗಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ  ಪೂಜೆ ನೆರವೇರಿಸಿದರು.  ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ವಿಶೇಷ ಪೂಜೆ ನಡೆಸಲಾಗಿದ್ದು, ಇಂದಿನಿಂದ ಫಿರಂಗಿಯಲ್ಲಿ ಸಿಬ್ಬಂದಿಗಳು ಡ್ರೈ ಪ್ರಾಕ್ಟೀಸ್ ಮಾಡಲಿದ್ದಾರೆ.  ಮೂರು ದಿನಗಳ ಬಳಿಕ ಗಜಪಡೆಗೆ ಫಿರಂಗಿ ತಾಲೀಮು ನಡೆಯಲಿದ್ದು, ಸಿಡಿಮದ್ದು ಸಿಡಿಸುವ ಮೂಲಕ ಪೊಲೀಸ್ ಇಲಾಖೆ ತಾಲೀಮು ನಡೆಸಲಿದೆ.
ಶಬ್ದದಿಂದ ಬೆದರದಂತೆ ಗಜಪಡೆಗೆ ತಾಲೀಮು ನಡೆಸಲಾಗುತ್ತಿದ್ದು, ಅರಮನೆ ಆವರಣದಲ್ಲಿ ಇಂದಿನಿಂದಲೇ  ಫಿರಂಗಿ ಡ್ರೈ ತಾಲೀಮು ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: