ಕ್ರೀಡೆ

ವಿಂಡೀಸ್ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

ಕಿಂಗ್ ಸ್ಟನ್,ಸೆ.3-ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 257 ರನ್ ಗಳಿಂದ ಬಗ್ಗು ಬಡಿದ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಟೀಂ ಇಂಡಿಯಾ ನೀಡಿದ್ದ 468 ರನ್‌ಗಳ ಬೃಹತ್ ಗೆಲುವಿನ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್, 210 ರನ್ ಗಳಿಸಲಷ್ಟೇ ಶಕ್ತವಾಯಿತು. ದಿನದಾಟ ಮುಂದುವರಿಸಿದ ವಿಂಡೀಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಅನಾರೋಗ್ಯಕ್ಕೆ ಒಳಗಾದ ಬ್ರಾವೋ 23 ರನ್ ಗಳಿಸಿ ನಿವೃತ್ತಿಯನ್ನು ಹೊಂದಿದರು. ಬ್ರಾವೋ ಸ್ಥಾನಕ್ಕೆ ಜರ್ಮೈನ್ ಬ್ಲ್ಯಾಕ್‌ವುಡ್ ಬದಲಿ ಆಟಗಾರನಾಗಿ ಸೇರಿಕೊಂಡರು.

ಈ ಹಂತದಲ್ಲಿ ಜತೆಗೂಡಿದ ಶಮರ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ಅಲ್ಪ ಹೊತ್ತು ಪ್ರತಿರೋಧ ಒಡ್ಡಿದರು. ಈ ಜೋಡಿಯನ್ನು ರವೀಂದ್ರ ಜಡೇಜಾ ಹೊರದಬ್ಬಿದರು. ಬೆನ್ನಲ್ಲೇ ಶಿಮ್ರಾ ಹೆಟ್ಮಾಯೆರ್ 1 ರನ್ ಗಳಿಗೆಇಶಾಂತ್ ಶರ್ಮಾ ಬ್ರೇಕ್ ಹಾಕಿದರು.

ಶಮರ್ ಬ್ರೂಕ್ಸ್ 50, ಜರ್ಮೈನ್ ಬ್ಲ್ಯಾಕ್‌ವುಡ್ 38, ಜೊಸನ್ ಹೊಲ್ಡರ್ 39, ರೆಹ್ ಕೀಮ್ ಕಾರ್ನ್ ವಾಲ್ 1, ಕೇಮರ್ ರೋಚ್ 5, ಶಾನನ್ ಗ್ಯಾಬ್ರಿಯಲ್ ಶೂನ್ಯಕ್ಕೆ ಔಟಾಗುವ ಮೂಲಕ ವೆಸ್ಟ್ ಇಂಡೀಸ್ 59. 5 ಓವರ್ ಗಳಲ್ಲಿ 210 ರನ್ ಗಳಿಸಿತು. ಇದರಿಂದಾಗಿ ಟೀಂ ಇಂಡಿಯಾ 257 ರನ್ ಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1, ಮೊಹಮ್ಮದ್ ಶಮಿ 3 , ರವೀಂದ್ರ ಜಡೇಜಾ 3 ವಿಕೆಟ್ ಪಡೆದುಕೊಂಡರು.

ಇದಕ್ಕೂ ಮುನ್ನ ವಿಂಡೀಸ್‌ಗೆ ಫಾಲೋಆನ್ ಹೇರದೆ 299 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಭಾರತ, ಉಪನಾಯಕ ಅಜಿಂಕ್ಯ ರಹಾನೆ 64 ಹಾಗೂ ಹನುಮ ವಿಹಾರಿ 53 ಅಜೇಯ ಅರ್ಧಶತಕಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 168 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ವಿಂಡೀಸ್‌ಗೆ 468 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಒಡ್ಡಿತು.

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ ಶತಕ 111 ಹಾಗೂ ನಾಯಕ ವಿರಾಟ್ ಕೊಹ್ಲಿ 76, ಇಶಾಂತ್ ಶರ್ಮಾ 57 ಹಾಗೂ ಮಾಯಾಂಕ್ ಅಗರ್ವಾಲ್ ಅವರ 55 ರನ್ ಗಳ ನೆರವಿನಿಂದ 416 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.

ಬಳಿಕ ಹ್ಯಾಟ್ರಿಕ್ ಸೇರಿದಂತೆ ಮೊದಲ ಇನ್ನಿಂಗ್ಸ್ ನಲ್ಲಿ ಆರು ವಿಕೆಟ್ ಸಾಧನೆ ಮಾಡಿದ ಜಸ್ಪ್ರೀತ್ ಬೂಮ್ರಾ ದಾಳಿಗೆ ಸಿಲುಕಿದ ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 117ರನ್ ಗಳಿಗೆ ಸರ್ವಪತನವನ್ನು ಕಂಡಿತು. ಭಾರತದ ಪರ 111 ರನ್ ಗಳಿಸಿದ ಹನುಮ ವಿಹಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. (ಎಂ.ಎನ್)

Leave a Reply

comments

Related Articles

error: