ಮೈಸೂರು

ಪಂಚಕರ್ಮ ಚಿಕಿತ್ಸಾಲಯದಲ್ಲಿ ಸೇರಿಕೊಂಡು ಸಿಬ್ಬಂದಿಗಳಿಗೆ ಭಯಹುಟ್ಟಿಸಿದ ‘ಉಡ’

ಮೈಸೂರು,ಸೆ.3:- ಮೈಸೂರು ಬೃಂದಾವನ ಬಡಾವಣೆಯಲ್ಲಿರುವ ಪಂಚಕರ್ಮ ಚಿಕಿತ್ಸಾಲಯದಲ್ಲಿ ಉಡವೊಂದು ಸೇರಿಕೊಂಡು ಸಿಬ್ಬಂದಿಗಳನ್ನು ಭಯಭೀತರನ್ನಾಗಿಸಿದ ಘಟನೆ ಇಂದು ನಡೆದಿದೆ.

ಇಂದು ಬೆಳಿಗ್ಗೆ ಚಿಕಿತ್ಸಾಲಯದ ಬಾಗಿಲು ತೆರೆಯುತ್ತಿದ್ದಂತೆ ಕರ್ತವ್ಯ ನಿರ್ವಹಿಸುವ ವೇಳೆ ಸಿಬ್ಬಂದಿಗಳಿಗೆ ಉಡವೊಂದು ಸೇರಿಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ನಗರ ಪಾಲಿಕೆಯ  ಮಾಜಿ ಸದಸ್ಯ ಸ್ನೇಕ್  ಶ್ಯಾಂ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸೂರ್ಯಕೀರ್ತಿ ಅವರು ಉಡವನ್ನು ಯಶಸ್ವಿಯಾಗಿ ಹಿಡಿದು ಕಾಡಿಗೆ ಕೊಂಡೊಯ್ದು ಬಿಟ್ಟಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಚಳಿ ಇರುವಾಗ ಉಡ ಬೆಚ್ಚಗಿನ ಜಾಗವನ್ನು ಹುಡುಕಿ ಹೊರಡುತ್ತದೆ. ಸೆಕೆ ಇರುವಾಗ ತಂಪು ವಾತಾವರಣವನ್ನು ಹುಡುಕಿ ಹೊರಡುತ್ತದೆ. ಹಾಗೆಯೇ ಇಲ್ಲಿಯೂ ಉಡ ಬಂದು ಸೇರಿಕೊಂಡಿರಬೇಕು ಎಂದರು.

ಉಡವನ್ನು ಚಿಕಿತ್ಸಾಲಯದಿಂದ ಸುರಕ್ಷಿತವಾಗಿ ಕೊಂಡೊಯ್ದಿದ್ದಕ್ಕೆ ಅಲ್ಲಿನ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: