ಮೈಸೂರು

ತಾಯಿ-ಮಗನ ಮೇಲೆ ಕಾಡು ಹಂದಿ ದಾಳಿ

ಜಮೀನಿನಲ್ಲಿ ಕೆಲಸ ಮಾಡಲು ತೆರಳುವಾಗ  ಕಾಡುಹಂದಿಯೊಂದು ತಾಯಿ ಹಾಗೂ ಆಕೆಯ ಮಗನ ಮೇಲೆ ದಾಳಿ ನಡೆಸಿದ್ದು, ಅವರು ಗಂಭೀರ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಗಾಯಗೊಂಡವರನ್ನು ಪರಿಯಾಪಟ್ಟಣ ತಾಲೂಕು ಉತ್ತೇನಹಳ್ಳಿಯ ನಿವಾಸಿಗಳಾದ ಅನಿತಾ ಹಾಗೂ ಲೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡಲು ತೆರಳುವ ವೇಳೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು  ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿತಾ ಅವರ ಮಗ ಲೋಹಿತ್ ಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

Leave a Reply

comments

Related Articles

error: