ಕರ್ನಾಟಕದೇಶಪ್ರಮುಖ ಸುದ್ದಿ

ಕಾವೇರಿ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನ್ಯಾ.ಅಭಯ ಮನೋಹರ್ ಸಪ್ರೆ ನೇಮಕ

ನವದೆಹಲಿ : ದೀರ್ಘ ಕಾಲದಿಂದ ಖಾಲಿ ಇದ್ದ ಕಾವೇರಿ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಅವರನ್ನು ನೇಮಿಸಲಾಗಿದೆ. ಸುಪ್ರೀಂಕೋರ್ಟ್‍ ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ರಾಜ್ಯಸಭೆಯಲ್ಲಿ ಇತ್ತೀಚೆಗೆ ಕೇಂದ್ರ ಇಂಧನ ಮಂತ್ರಿ ಪೀಯೂಷ್ ಗೋಯಲ್ ಅವರು ಮಾತನಾಡುತ್ತಾ, ಕಾವೇರಿ ನ್ಯಾಯಾಧಿಕರಣದಲ್ಲಿ ದೀರ್ಘ ಕಾಲದಿಂದ ಅಧ್ಯಕ್ಷರ ಹುದ್ದೆ ಖಾಲಿ ಇದೆ. ಇರುವ ಇಬ್ಬರೂ ಸದಸ್ಯರಿಗೆ 70 ವರ್ಷ ದಾಟಿದೆ. ಅಧ್ಯಕ್ಷರ ನೇಮಕದ ನಂತರ ಕಾವೇರಿ ವಿಚಾರಣೆಯನ್ನು ನ್ಯಾಯಾಧಿಕರಣ ಪುನಃ ಆರಂಭಿಸುತ್ತಿಲ್ಲ. ಈವರಗೆ ನಿರ್ವಹಿಸಿದ್ದ ಜವಾಬ್ದಾರಿಗಳನ್ನು ನ್ಯಾಯಮೂರ್ತಿ ಸಪ್ರೆ ಅವರು ಮುಂದುವರಿಸಲಿದ್ದಾರೆ ಎಂದು ಗೋಯಲ್‍ ಮಾಹಿತಿ ನೀಡಿದ್ದರು.

ಪ್ರಸ್ತುತ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಸಪ್ರೆ ಅವರು 2019ರ ಆಗಸ್ಟ್ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಈ ಹಿಂದೆ ಮಧ್ಯಪ್ರದೇಶ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದರು. ಕಾವೇರಿ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Leave a Reply

comments

Related Articles

error: